Commonwealth Games : ಮಹಿಳಾ ಟೇಬಲ್ ಟೆನಿಸ್ ತಂಡ ಆಯ್ಕೆಗೆ ಕರ್ನಾಟಕ ಹೈಕೋರ್ಟ್ ಬ್ರೇಕ್‌

ಟೇಬಲ್ ಟೆನಿಸ್ ತಂಡ ಆಯ್ಕೆಗೆ ಬ್ರೇಕ್ ಹಾಕಿದ ಕರ್ನಾಟಕ ಹೈಕೋರ್ಟ್
ತಂಡದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬೆಂಗಳೂರಿನ ಟಿಟಿ ಪಟು ಅರ್ಚನಾ ಕಾಮತ್‌
ಮಹಿಳಾ ತಂಡದ ಅಂತಿಮ ಪಟ್ಟಿಯನ್ನು ಗೇಮ್ಸ್‌ ಆಯೋಜಕರಿಗೆ ಜೂ.22ರವರೆಗೆ ರವಾನಿಸದಂತೆ ಕೋರ್ಟ್ ಸೂಚನೆ

Karnataka High Court Restrains Table Tennis Federation From Sending Selection List For Commonwealth Games 2022 kvn

ಬೆಂಗಳೂರು(ಜೂ.18): ಮುಂಬರುವ ಜುಲೈ 28ರಿಂದ ಆಗಸ್ಟ್‌ 8ರ ವರೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ (Commonwealth Games 2022) ಪಾಲ್ಗೊಳ್ಳುವ ಭಾರತದ ಟೇಬಲ್‌ ಟೆನಿಸ್‌ ಮಹಿಳಾ ತಂಡದ ಅಂತಿಮ ಆಯ್ಕೆ ಪಟ್ಟಿಯನ್ನು ಜೂ.22ರವರೆಗೆ ಗೇಮ್ಸ್‌ ಆಯೋಜಕರಿಗೆ ರವಾನಿಸದಂತೆ ಭಾರತೀಯ ಟೇಬಲ್‌ ಟೆನಿಸ್‌ ಒಕ್ಕೂಟ(ಟಿಟಿಎಫ್‌ಐ)ಕ್ಕೆ ಹೈಕೋರ್ಚ್‌ ಮಧ್ಯಂತರ ಆದೇಶ ಮಾಡಿದೆ. ತಂಡದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರಿನ ಖ್ಯಾತ ಟಿಟಿ ಪಟು ಅರ್ಚನಾ ಕಾಮತ್‌ ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. 

ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮಹಿಳಾ ತಂಡದ ಅಂತಿಮ ಪಟ್ಟಿಯನ್ನು ಗೇಮ್ಸ್‌ ಆಯೋಜಕರಿಗೆ ಜೂ.22ರವರೆಗೆ ರವಾನಿಸದಂತೆ ಟಿಟಿಎಫ್‌ಐಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ. ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ಟಿಟಿಎಫ್‌ಐ, ಭಾರತೀಯ ಕ್ರೀಡಾ ಪ್ರಾಧಿಕಾರ, ಮಹಿಳಾ ತಂಡದಲ್ಲಿ ಸ್ಥಾನ ಪಡೆದಿರುವ ಆಟಗಾರ್ತಿಯರಿಗೆ ಇ-ಮೇಲ್‌ ಮೂಲಕ ತುರ್ತು ನೋಟಿಸ್‌ ಜಾರಿಗೊಳಿಸಿತು.

ಕಾಮನ್ವೆಲ್ತ್‌: ಅಥ್ಲೆಟಿಕ್ಸ್‌ ತಂಡಕ್ಕೆ ರಾಜ್ಯದ ಐಶ್ವರ್ಯಾ, ಮನು

ನವದೆಹಲಿ: ಮುಂಬರುವ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್‌(ಎಎಫ್‌ಐ) ಗುರುವಾರ 37 ಮಂದಿಯ ಅಥ್ಲೆಟಿಕ್ಸ್‌ ತಂಡವನ್ನು ಪ್ರಕಟಿಸಿದ್ದು, ಟೋಕಿಯೋ ಒಲಿಂಪಿಕ್ಸ್‌ (Tokyo Olympics) ಐತಿಹಾಸಿಕ ಚಿನ್ನ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ (Neeraj Chopra) ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕದ ಭರವಸೆಯ ಜಾವೆಲಿನ್‌ ಪಟು ಡಿ.ಪಿ.ಮನು (DP Manu) ಮತ್ತು ಲಾಂಗ್‌ಜಂಪ್‌, ತ್ರಿಪಲ್‌ ಜಂಪ್‌ ಪಟು ಐಶ್ವರ್ಯಾ ಬಾಬು ಕೂಡಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಐಶ್ವರ್ಯಾ ಇತ್ತೀಚೆಗೆ ನಡೆದ ಅಂತಾರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಎರಡೂ ಸ್ಪರ್ಧೆಗಳಲ್ಲಿ ಚಿನ್ನ ಪಡೆದಿದ್ದರು.

Commonwealth Games ಕೂಟದಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ನೀರಜ್ ಚೋಪ್ರಾ

ಭಾರತ ತಂಡದಲ್ಲಿ 18 ಮಹಿಳಾ ಅಥ್ಲೀಟ್‌ಗಳಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಿಮಾ ದಾಸ್‌ (Hima Das), ಒಲಿಂಪಿಯನ್‌ ದ್ಯುತಿ ಚಾಂದ್‌ (Dutee Chand) ಮಹಿಳೆಯರ 4*100 ಮೀ. ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ತಮ್ಮದೇ ರಾಷ್ಟ್ರೀಯ ದಾಖಲೆಗಳನ್ನು ಉತ್ತಮ ಪಡಿಸಿಕೊಂಡ 3,000 ಮೀ. ಸ್ಟೀಪಲ್‌ಚೇಸ್‌ ಪಟು ಅವಿನಾಶ್‌ ಸಬ್ಳೆ ಮತ್ತು 100 ಮೀ. ಹರ್ಡಲ್ಸ್‌ ಓಟಗಾರ್ತಿ ಜ್ಯೋತಿ ಯರ್ರಾಜಿ ಅವರಿಗೂ ಸ್ಥಾನ ಲಭಿಸಿದೆ. 

2022ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಭಾರತ ಅಥ್ಲೀಟ್ಸ್‌ಗಳ ತಂಡ ಹೀಗಿದೆ ನೋಡಿ

ಪುರುಷ ಅಥ್ಲೀಟ್‌ಗಳು:

ಅವಿನಾಶ್‌ ಸಬ್ಳೆ(3000 ಮೀಟರ್ ಸ್ಟೀಪಲ್‌ಚೇಸ್)
ನಿತೀಂದರ್ ರಾವತ್(ಮ್ಯಾರಥಾನ್)
ಎಂ ಶ್ರೀಶಂಕರ್ ಮತ್ತು ಮೊಹಮ್ಮದ್ ಅನೀಸ್ ಯಾಹಿಯಾ(ಲಾಂಗ್ ಜಂಪ್)
ಅಬ್ದುಲ್ಲಾ ಅಬುಬುಕರ್, ಪ್ರವೀಣ್ ಚೆತ್ರಾವೆಲ್‌ ಮತ್ತ ಎಲ್ಡೋಸ್‌ ಪೌಲ್ (ತ್ರಿಪಲ್ ಜಂಪ್)
ತಜೀಂದರ್ ಸಿಂಗ್ ತೂರ್(ಶಾಟ್‌ಪುಟ್)
ನೀರಜ್ ಚೋಪ್ರಾ, ಡಿ.ಪಿ. ಮನು ಮತ್ತು ರೋಹಿತ್ ಯಾದವ್ (ಜಾವೆಲಿನ್)
ಸಂದೀಪ್ ಕುಮಾರ್, ಅಮಿತ್ ಖತ್ರಿ (ರೇಸ್ ವಾಕಿಂಗ್)
ಅಮೋಜ್ ಜೇಕಬ್, ನೋಹ್ ನಿರ್ಮಲ್ ಟಾಮ್, ಆರ್ಕಿಯಾ ರಾಜೀವ್, ಮೊಹಮ್ಮದ್ ಅಜ್ಮಲ್, ನಾಗನಾಥನ್ ಪಂಡಿ ಮತ್ತು ರಾಜೇಶ್ ರಮೇಶ್ (4*400 ಮೀಟರ್ ರಿಲೇ)

ಮಹಿಳಾ ಅಥ್ಲೀಟ್‌ಗಳು

ಎಸ್‌. ಧನಲಕ್ಷ್ಮಿ(100 ಮೀಟರ್ ಓಟ & 4*400 ರಿಲೇ)
ಜ್ಯೋತಿ ಯಾರ್ರಾಜಿ (100 ಮೀಟರ್ ಹರ್ಡಲ್)
ಐಶ್ವರ್ಯ ಬಿ (ಲಾಂಗ್ ಜಂಪ್ & ತ್ರಿಪಲ್ ಜಂಪ್)
ಆನ್ಸಿ ಸೋಜನ್ (ಲಾಂಗ್ ಜಂಪ್)
ಮನ್‌ಪ್ರೀತ್ ಕೌರ್ (ಶಾಟ್‌ಪುಟ್)
ನವಜೀತ್ ಕೌರ್ ದಿಲ್ಲೋನ್ & ಸೀಮಾ ಪೂನಿಯಾ (ಡಿಸ್ಕಸ್ ಥ್ರೋ)
ಅನ್ನು ರಾಣಿ & ಶಿಲ್ಪ ರಾಣಿ (ಜಾವೆಲಿನ್ ಥ್ರೋ)
ಮಂಜು ಬಾಲಾ ಸಿಂಗ್ & ಸರೀತಾ ರೋಮಿತ್ ಸಿಂಗ್ (ಹ್ಯಾಮರ್ ಥ್ರೋ)
ಭಾವ್ನಾ ಝಾಟ್ & ಪ್ರಿಯಾಂಕ ಗೋಸ್ವಾಮಿ (ರೇಸ್ ವಾಕಿಂಗ್)
ಹಿಮಾ ದಾಸ್, ದ್ಯುತಿ ಚಾಂದ್, ಸ್ರಬಾನಿ ನಂದ ಎಂ ವಿ ಜಿಲ್ನಾ ಮತ್ತಯ ಎನ್ ಎಸ್ ಸಿಮಿ (4*400 ಮೀಟರ್ ರಿಲೇ)

Latest Videos
Follow Us:
Download App:
  • android
  • ios