ಭಾರತ ‘ಎ’ ತಂಡಕ್ಕಿಂದು ವಿಂಡೀಸ್ ಸವಾಲು

Today India A Will Face West Indies A
Highlights

ಅಭ್ಯಾಸ ಪಂದ್ಯದಲ್ಲಿ ಅದ್ಭುತ ಪ್ರದರ್ಶನದಿಂದ ಗಮನಸೆಳೆದಿದ್ದ ಭಾರತ ‘ಎ’ ತಂಡ, ಶುಕ್ರವಾರ ಡರ್ಬಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 7 ವಿಕೆಟ್ ಸೋಲು ಕಂಡಿತ್ತು.

ಲೈಸೆಸ್ಟರ್(ಜೂ.25]: ಇಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ‘ಎ’ ತಂಡ, ಸೋಮವಾರ ತನ್ನ 2ನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ‘ಎ’ ಎದುರು ಸೆಣಸಲಿದೆ.

ಅಭ್ಯಾಸ ಪಂದ್ಯದಲ್ಲಿ ಅದ್ಭುತ ಪ್ರದರ್ಶನದಿಂದ ಗಮನಸೆಳೆದಿದ್ದ ಭಾರತ ‘ಎ’ ತಂಡ, ಶುಕ್ರವಾರ ಡರ್ಬಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 7 ವಿಕೆಟ್ ಸೋಲು ಕಂಡಿತ್ತು. ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ, ಬೌಲರ್‌ಗಳ ನೀರಸ ಪ್ರದರ್ಶನದಿಂದ ಇಂಗ್ಲೆಂಡ್ ಎದುರು ಪರಾಭವಗೊಂಡಿತ್ತು.

ವಿಂಡೀಸ್ ವಿರುದ್ಧ ಎಚ್ಚರಿಕೆಯ ಹೆಜ್ಜೆಯನ್ನಿರಿಸುವ ಲೆಕ್ಕಚಾರದಲ್ಲಿ ಶ್ರೇಯಸ್ ಅಯ್ಯರ್ ಪಡೆ ಇದೆ.

loader