ಲಂಡನ್(ಡಿ.11): ರಷ್ಯಾದಲ್ಲಿ ವ್ಯಾಪಕವಾಗಿ ಹರಡಿರುವ ಡೋಪಿಂಗ್‌'ನಿಂದಾಗಿ ರಿಯೊ ಒಲಿಂಪಿಕ್ಸ್‌ನಿಂದ ಆ ದೇಶದ ಅಥ್ಲೀಟ್‌ಗಳನ್ನು ನಿಷೇಧಿಸಿದ್ದ ಬೆನ್ನಲ್ಲೇ ಇದೀಗ, 2018ರಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ನಿಂದಲೂ ಆ ದೇಶದ ಅಥ್ಲೀಟ್‌'ಗಳನ್ನು ನಿಷೇಧಿಸಬೇಕೆಂಬ ಕೂಗೂ ಎದ್ದಿದೆ.

ರಿಯೊ ಒಲಿಂಪಿಕ್ಸ್‌'ನ ನಿಷೇಧದ ನಂತರವೂ ಆ ದೇಶದಲ್ಲಿ ಸರ್ಕಾರಿ ಪ್ರಾಯೋಜಿತ ಉದ್ದೀಪನಾ ಪೀಡೆ ಜಾರಿಯಲ್ಲಿದ್ದು ಈ ಬಾರಿಯ ಚಳಿಗಾಲದ ಒಲಿಂಪಿಕ್ಸ್‌ನಿಂದಲೂ ಆ ದೇಶದ ಅಥ್ಲೀಟ್‌ಗಳನ್ನು ನಿಷೇಧಿಸಿಬೇಕೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದೆ ಎಂದು ಪಿಟಿಐ ವರದಿ ಮಾಡಿದೆ.

2012ರ ಲಂಡನ್ ಒಲಿಂಪಿಕ್ಸ್ ಹಾಗೂ 2014ರ ಸೋಚಿ ವಿಂಟರ್ ಗೇಮ್ಸ್‌ನಲ್ಲಿ ರಷ್ಯಾದ ಡೋಪಿಂಗ್ ಹಗರಣ ಬಯಲಾಗಿತ್ತು.