ಕ್ರಿಕೆಟ್ Vs ಪ್ರಿಯಾ ವಾರಿಯರ್: ನಿಮಗೆ ಯಾರ ಎಕ್ಸ್'ಪ್ರೆಷನ್ ಇಷ್ಟವಾಗುತ್ತೆ ನೋಡಿ..?

First Published 15, Feb 2018, 6:14 PM IST
This shot is more beautiful than Priya Prakash Varrier Viral memes hit cricket world
Highlights

ಇದೆಲ್ಲವನ್ನು ಹೊರತುಪಡಿಸಿ ಪ್ರಿಯಾ ವಿಡಿಯೋವನ್ನು ಟ್ರೋಲ್ ಕೂಡಾ ಮಾಡಲಾಗುತ್ತಿದೆ. ಇದಕ್ಕೆ ಕ್ರಿಕೆಟ್ ಜಗತ್ತು ಕೂಡಾ ಹೊರತಾಗಿಲ್ಲ. ಧೋನಿ, ಕೊಹ್ಲಿ, ಇಶಾಂತ್, ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ಆಟಗಾರನ್ನು ಸಮೀಕರಿಸಿ ಟ್ರೋಲ್ ಮಾಡಲಾಗಿದೆ.

ಕೇವಲ ಕಣ್ಸನ್ನೆ ಮೂಲಕವೇ ದಿನ ಬೆಳಗಾಗುವುದರೊಳಗಾಗಿ ಫೇಮಸ್ ಆದ ಪ್ರಿಯಾ ಪ್ರಕಾಶ್ ವಾರಿಯರ್ 'ನ್ಯಾಷನಲ್ ಕ್ರಷ್' ಎನಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಸಾಮಾಜಿಕ ಜಾಲತಾಣಗಳಾದ ಫೇಸ್'ಬುಕ್, ಇನ್'ಸ್ಟಾಗ್ರಾಂ, ಟ್ವಿಟ್ಟರ್ ಅಲ್ಲದೇ ಮುಖ್ಯ ಸುದ್ದಿವಾಹಿನಿಗಳಲ್ಲೂ ಪ್ರಿಯಾ ಮುದ್ದಾದ ಭಾವಾಭಿನಯ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಇದಷ್ಟೇ ಅಲ್ಲದೇ ಪ್ರಿಯಾ ನಟಿಸಿದ 'ಒರು ಆದಾರ್​​​ ಲವ್​​​’ ಸಿನಿಮಾದ ಹಾಡಿನ ದೃಶ್ಯದಲ್ಲಿ ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ದೃಶ್ಯಾವಳಿಗಳಿವೆ ಎಂದು ಮೂಲಭೂತವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೆಲ್ಲವನ್ನು ಹೊರತುಪಡಿಸಿ ಪ್ರಿಯಾ ವಿಡಿಯೋವನ್ನು ಟ್ರೋಲ್ ಕೂಡಾ ಮಾಡಲಾಗುತ್ತಿದೆ. ಇದಕ್ಕೆ ಕ್ರಿಕೆಟ್ ಜಗತ್ತು ಕೂಡಾ ಹೊರತಾಗಿಲ್ಲ. ಧೋನಿ, ಕೊಹ್ಲಿ, ಇಶಾಂತ್, ಶಾಸ್ತ್ರಿ ಸೇರಿದಂತೆ ಕ್ರಿಕೆಟ್ ಆಟಗಾರನ್ನು ಸಮೀಕರಿಸಿ ಟ್ರೋಲ್ ಮಾಡಲಾಗಿದೆ. ಆದರೆ ಸಚಿನ್ ಸ್ಟ್ರೈಟ್ ಡ್ರೈವ್ ಪ್ರಿಯಾ ವಾರಿಯರ್'ಗಿಂತ ಅದ್ಭುತವಾಗಿದೆ ಎಂದು ಅಭಿಮಾನಿಯೊಬ್ಬ ಅಭಿಪ್ರಾಯಪಟ್ಟಿದ್ದಾನೆ.

loader