ಮಹೇಂದ್ರ ಸಿಂಗ್ ಧೋನಿ ಮೊನ್ನೆ 200 ಸಿಕ್ಸ್ ಸಿಡಿಸಿದ ಸಾಧನೆ ಮಾಡಿದರು. ಆದರೆ ಅವರ 200ನೇ ಸಿಕ್ಸ್ ಅನ್ನ ಅಂಪೈರ್ ಕೊಡಲೇ ಇಲ್ಲ. 200ನೇ ಸಿಕ್ಸ್'ಗಾಗಿ ಮಹಿ ಮತ್ತೊಂದು ಸಿಕ್ಸ್ ಹೊಡೆಯಬೇಕಾಯಿತು. ಅಂಪೈರ್ ಯಾಕೆ ಆ ಸಿಕ್ಸ್ ಅನ್ನು ಸಿಕ್ಸ್ ಎಂದು ಘೋಷಿಸಲಿಲ್ಲ ಅಂತ ಯೋಚ್ನೆ ಮಾಡ್ತಿದ್ರೆ ಈ ಸ್ಟೋರಿ ನೋಡಿ.
ಕಟಕ್(ಜ.21): ಮಹೇಂದ್ರ ಸಿಂಗ್ ಧೋನಿ ಮೊನ್ನೆ 200 ಸಿಕ್ಸ್ ಸಿಡಿಸಿದ ಸಾಧನೆ ಮಾಡಿದರು. ಆದರೆ ಅವರ 200ನೇ ಸಿಕ್ಸ್ ಅನ್ನ ಅಂಪೈರ್ ಕೊಡಲೇ ಇಲ್ಲ. 200ನೇ ಸಿಕ್ಸ್'ಗಾಗಿ ಮಹಿ ಮತ್ತೊಂದು ಸಿಕ್ಸ್ ಹೊಡೆಯಬೇಕಾಯಿತು. ಅಂಪೈರ್ ಯಾಕೆ ಆ ಸಿಕ್ಸ್ ಅನ್ನು ಸಿಕ್ಸ್ ಎಂದು ಘೋಷಿಸಲಿಲ್ಲ ಅಂತ ಯೋಚ್ನೆ ಮಾಡ್ತಿದ್ರೆ ಈ ಸ್ಟೋರಿ ನೋಡಿ.
ಎಲ್ಲಿ ಹೋಯ್ತು ಆ ಒಂದು ಸಿಕ್ಸ್
ಕಟಕ್ನ ಬಾರಬತಿ ಸ್ಟೇಡಿಯಂನಲ್ಲಿ ಮಹೇಂದ್ರ ಸಿಂಗ್ ಧೋನಿಯದ್ದೇ ಸದ್ದು. ಒಂದು ಕಡೆ ಯುವರಾಜನ ಅಬ್ಬರ ನಡೆಯುತ್ತಿದ್ದರೆ, ಮತ್ತೊಂದ ಕಡೆ ಕೂಲ್ ಮಹಿಯ ಆರ್ಭಟ ನಡೆಸಿದ್ರು. ಆರಂಭದಲ್ಲಿ ಕೂಲಾಗಿಯೇ ಇದ್ದ ಧೋನಿ, ಹಾಫ್ ಸೆಂಚುರಿ ಬಾರಿಸಿದ ನಂತ್ರ ತಮ್ಮ ಗೈರ್ ಚೇಂಜ್ ಮಾಡಿದ್ರು.
ಮೊನ್ನೆ ಮಹಿ ನೂತನ ರೆಕಾರ್ಡ್ ಮಾಡಿದ್ರು. ಒಂಡೇ ಕ್ರಿಕೆಟ್ನಲ್ಲಿ 200 ಸಿಕ್ಸ್ ಹೊಡೆದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ರಾಂಚಿ ಱಂಬೋ ಪಾತ್ರರಾದ್ರು. ಇಂಗ್ಲೆಂಡ್ ವಿರುದ್ಧ ಸೆಕೆಂಡ್ ಮ್ಯಾಚ್ನಲ್ಲಿ ಧೋನಿ ಸಿಕ್ಸರ್ಗಳ ಸುರಿಮಳೆಗೈಯ್ದರು. ಮೈದಾನದಲ್ಲಿ ಆಂಗ್ಲ ಬೌಲರ್ಗಳನ್ನ ಚೆಂಡಾಡಿ, ಸಿಡಿಸಿದ್ದು ಬರೋಬ್ಬರಿ 7 ಸಿಕ್ಸರ್ಗಳನ್ನ.
ಆದ್ರೆ ಪಂದ್ಯ ಮುಗಿದ ಮೇಲೆ ಮಹಿ ಖಾತೆಯಲ್ಲಿ ಇದದ್ದು 6 ಸಿಕ್ಸ್ಗಳು ಮಾತ್ರ. ಅಯ್ಯೋ ಧೋನಿ ಸಿಡಿಸಿದ್ದು 7 ಸಿಕ್ಸ್ಗಳನ್ನ. ಆದ್ರೆ ಅವರ ಖಾತೆಯಿಂದ ಒಂದು ಸಿಕ್ಸ್ ಹೇಗೆ ಖಾಲಿ ಆಯ್ತು ಅಂತ ಎಲ್ಲರೂ ಯೋಚಿಸಿದ್ರು. ಹೌದು, ಧೋನಿ ಸಿಡಿಸಿದ್ದು 7 ಸಿಕ್ಸರ್. ಆದ್ರೆ ಅಂಪೈರ್ಸ್ ಅವರ ಖಾತೆಗೆ ಹಾಕಿದ್ದು ಮಾತ್ರ 6 ಸಿಕ್ಸ್ಗಳನ್ನ. ಹಾಗಾದ್ರೆ ಇನ್ನೊಂದು ಸಿಕ್ಸ್ ಅನ್ನ ಅಂಪೈರ್ ಏನ್ ಮಾಡಿದ್ರು ಗೊತ್ತಾ..?
ಧೋನಿ ಸಿಕ್ಸ್ ನುಂಗಿದ ಸ್ಪೈಡರ್ ಕ್ಯಾಮರಾ..!: 200ನೇ ಸಿಕ್ಸ್ ಡೆಡ್ ಬಾಲ್ ಆಯ್ತು..!
ಕ್ರಿಕೆಟ್ ಮೈದಾನದ ಪ್ರತಿಯೊಂದು ಭಾಗವನ್ನು ಅದ್ದೂರಿಯಾಗಿ ತೋರಿಸುವ, ನೂರಾರು ಮೀಟರ್ ಅಂತರವನ್ನ ಕ್ಷಣದಲ್ಲಿ ಚಲಿಸುವ, ಆಟಗಾರರ ಪ್ರತಿ ಚಲನವಲನವನ್ನು ತುಂಬಾ ಹತ್ತಿರದಿಂದ ಮೈದಾನದ ದೃಶ್ಯಗಳನ್ನ ಸೂಪರ್ ಆಗಿ ತೋರಿಸುವ ಸಾಮರ್ಥ್ಯ ಈ ಸ್ಪೈಡರ್ ಕ್ಯಾಮರಾಗಿದೆ. ಅದ್ಭುತ ತಂತ್ರಜ್ಞಾನದೊಂದಿಗೆ ಅಳವಡಿಸಲಾಗಿರುವ ಈ ಕ್ಯಾಮರಾ ಐಪಿಎಲ್ ಮೂಲ್ಕ ಭಾರತಕ್ಕೆ ಪರಿಚಯವಾಯ್ತು. ಇದೇ ಕ್ಯಾಮರಾ ಧೋನಿಯ 200ನೇ ಸಿಕ್ಸ್ ನುಂಗಿ ಹಾಕಿದ್ದು.
ಹೌದು, ಮಹಿಯ ಒಂದು ಸಿಕ್ಸ್ ಅನ್ನ ನುಂಗು ಹಾಕಿದ್ದು ಅಂಪೈರ್ ಅಲ್ಲ ಬದಲಿಗೆ ಸ್ಪೈಡರ್ ಕ್ಯಾಮರಾ. ಧೋನಿ 93 ರನ್ಗಳಿದ್ದಾಗ ಕ್ರಿಸ್ ವೋಕ್ಸ್ ಬೌಲಿಂಗ್ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ್ರು. ಆದ್ರೆ ಆ ಬಾಲ್ ಸಿಕ್ಸ್ ಹೋಗೋಕು ಮುನ್ನ ಸ್ಟೇಡಿಯಂನಲ್ಲಿ ನೇತಾಡುತ್ತಿದ್ದ ಸ್ಪೈಡರ್ ಕ್ಯಾಮರಾಗೆ ಟಚ್ ಮಾಡಿಕೊಂಡು ಹೋಯ್ತು. ಇದನ್ನ ಗಮನಿಸಿದ ಫೀಲ್ಡ್ ಅಂಪೈರ್, ಆ ಬಾಲನ್ನ ಡೆಡ್ ಬಾಲ್ ಎಂದು ಘೋಷಿಸಿದ್ರು. ಅಲ್ಲಿಗೆ ಧೋನಿ ಖಾತೆಯಿಂದ ಒಂದು ಸಿಕ್ಸ್ ಖಾಲಿಯಾಯ್ತು. ಜೊತೆಗೆ ಅವರು ಸೆಂಚುರಿ ದಾಖಲಿಸಲು ತಡವಾಯ್ತು.
ಆ ಸಿಕ್ಸ್ ಧೋನಿಯ ಒಂಡೇ ಕ್ರಿಕೆಟ್ನಲ್ಲಿ 200ನೇ ಸಿಕ್ಸ್ ಆಗಿತ್ತು. ಆದ್ರೆ ಅಂಪೈರ್ನಿಂದ ಅದು ಸಾಧ್ಯವಾಗಲಿಲ್ಲ. ಮರು ಎಸೆತದಲ್ಲೇ ಮತ್ತೊಂದು ಸಿಕ್ಸ್ ಸಿಡಿಸೋ ಮೂಲ್ಕ ಮಹಿ 200 ಸಿಕ್ಸ್ ಸಿಡಿಸಿದ ಸಾಧನೆ ಮಾಡಿದ್ರು.
ನೇರಲಗುಡ್ಡ ಲಿಂಗರಾಜು, ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್
