ಮೊಹಾಲಿಯಲ್ಲಿ ಪ್ರತಿ ಬಾರಿ ಕ್ರಿಕೆಟ್ ಪಂದ್ಯ ನಡೆದಾಗಲೂ ಕ್ರೀಡಾಂಗಣ ಪರಿಶೀಲನೆಗೆ ಈ ಧೋನಿಯನ್ನು ಬಳಸಿಕೊಳ್ಳಲಾಗುತ್ತಿತ್ತು

ನವದೆಹಲಿ(ಡಿ.04 ಡಿ.12ರಂದು ಧೋನಿ ನಿವೃತ್ತರಾಗಲಿದ್ದಾರೆ. ಆದರೆ ಈ ಸುದ್ದಿ ಕೇಳಿ ಶಾಕ್ ಆಗಬೇಡಿ. ನಿವೃತ್ತಿಗೊಳ್ಳುತ್ತಿರುವುದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಲ್ಲ, ಬದಲಾಗಿ ಮೊಹಾಲಿ ಪೊಲೀಸ್ ಇಲಾಖೆಯ ‘ಧೋನಿ’ ಹೆಸರಿನ ಶ್ವಾನ. 2007, ಫೆ.10ರಂದು ಜಿಲ್ಲಾ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ‘ಧೋನಿ’ ಈಗಾಗಲೆ 10 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಮೊಹಾಲಿಯಲ್ಲಿ ಪ್ರತಿ ಬಾರಿ ಕ್ರಿಕೆಟ್ ಪಂದ್ಯ ನಡೆದಾಗಲೂ ಕ್ರೀಡಾಂಗಣ ಪರಿಶೀಲನೆಗೆ ಈ ಧೋನಿಯನ್ನು ಬಳಸಿಕೊಳ್ಳಲಾಗುತ್ತಿತ್ತು. 2011ರ ಭಾರತ-ಪಾಕ್ ವಿಶ್ವಕಪ್ ಸೆಮಿಫೈನಲ್ ಪಂದ್ಯದ ವೇಳೆ ಸಹ ಈ ನಾಯಿ ಕಾರ್ಯನಿರ್ವಹಿಸಿತ್ತು.