ಭಾರತ ತಂಡ ವಿವಿಎಸ್ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರ ಅತ್ಯಮೋಘ ಆಟದ ನೆರವಿನಿಂದ 171 ರನ್‌ಗಳ ಅವಿಸ್ಮರಣೀಯ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
ಮುಂಬೈ(ಮಾ.14): ಭಾರತದ ಕ್ರಿಕೆಟ್ ಕಾಶಿ ಕೊಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಮಾರ್ಚ್ 14, 2001ರಂದು ಐತಿಹಾಸಿಕ ಪಂದ್ಯವೊಂದಕ್ಕೆ ಸಾಕ್ಷಿಯಾಗಿ ಇಂದಿಗೆ 16 ವರ್ಷಗಳೇ ಕಳೆದಿವೆ. ಆದರೂ ಆ ಇನಿಂಗ್ಸ್ ಭಾರತೀಯ ಕ್ರಿಕೆಟ್ ಪ್ರಿಯರಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ.
ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ವಿವಿಎಸ್ ಲಕ್ಷ್ಮಣ್ ಹಾಗೂ ರಾಹುಲ್ ದ್ರಾವಿಡ್ ಅವರ ಅತ್ಯಮೋಘ ಆಟದ ನೆರವಿನಿಂದ 171 ರನ್ಗಳ ಅವಿಸ್ಮರಣೀಯ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ 171 ರನ್ಗೆ ಆಲೌಟ್ ಆಗಿದ್ದ ಭಾರತ, ಆಸ್ಟ್ರೇಲಿಯಾಗೆ 274 ರನ್ ಮುನ್ನಡೆ ಬಿಟ್ಟುಕೊಟ್ಟಿತ್ತು. ಆದರೆ, ದ್ವಿತೀಯ ಇನ್ನಿಂಗ್ಸ್ನಲ್ಲಿ ಲಕ್ಷ್ಮಣ್ 281 ಹಾಗೂ ದ್ರಾವಿಡ್ 180 ರನ್ಗಳ ಸೊಗಸಾದ ಆಟದಿಂದ ಭಾರತ 7 ವಿಕೆಟ್ ನಷ್ಟಕ್ಕೆ 657 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಟೀಂ ಇಂಡಿಯಾ ನೀಡಿದ 384 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಕಾಂಗರೂ ಪಡೆ 212 ರನ್'ಗಳಿಗೆ ಆಲೌಟ್ ಆಗಿ ಭಾರತಕ್ಕೆ ಶರಣಾಗಿತ್ತು.
ಹೀಗಿತ್ತು ಆ ಪಂದ್ಯ....

