ಕುಂಬ್ಳೆ ಕೈ ಚಳಕಕ್ಕೆ ಹೊಸತೊಂದು ಇತಿಹಾಸವೇ ನಿರ್ಮಾಣವಾಯ್ತು. ದೆಹಲಿ ಮೈದಾನದಲ್ಲಿ ಕೇವಲ 74 ರನ್ ನೀಡಿ ಪಾಕ್'ನ 10 ವಿಕೆಟ್ ಪಡೆಯುವಲ್ಲಿ ಜಂಬೋ ಯಶಸ್ವಿಯಾದರು.

ಇಂದಿಗೆ ಸರಿಸುಮಾರು 19 ವರ್ಷಗಳ ಹಿಂದೆ ಫಿರೋಜ್ ಷಾ ಕೋಟ್ಲಾದಲ್ಲಿಕನ್ನಡಿಗ ಅನಿಲ್ ಕುಂಬ್ಳೆ ಪಾಕಿಸ್ತಾನ ತಂಡದ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು.

ಫೆಬ್ರವರಿ 7, 1999ರಲ್ಲಿ ಗೂಗ್ಲಿ ಸ್ಪೆಷಲಿಸ್ಟ್ ಕುಂಬ್ಳೆ ವಿನೂತನ ದಾಖಲೆ ಬರೆದಿದ್ದರು. ಒಂದು ಹಂತದಲ್ಲಿ ಭಾರತ ನೀಡಿದ್ದ 420 ರನ್'ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ಉತ್ತಮಆರಂಭವನ್ನೇ ಪಡೆದಿತ್ತು. ಆದರೆ ಕುಂಬ್ಳೆ ಕೈ ಚಳಕಕ್ಕೆ ಹೊಸತೊಂದು ಇತಿಹಾಸವೇನಿರ್ಮಾಣವಾಯ್ತು. ದೆಹಲಿ ಮೈದಾನದಲ್ಲಿ ಕೇವಲ 74 ರನ್ ನೀಡಿ ಪಾಕ್'10 ವಿಕೆಟ್ಪಡೆಯುವಲ್ಲಿ ಜಂಬೋ ಯಶಸ್ವಿಯಾದರು.

ಕುಂಬ್ಳೆ 10 ವಿಕೆಟ್ ಪಡೆದ ಕ್ಷಣ ಹೀಗಿತ್ತು...

ಕುಂಬ್ಳೆ ಸಾಧನೆಯನ್ನು ಸ್ಮರಿಸಿ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು ಹೀಗೆ..

Scroll to load tweet…
Scroll to load tweet…

ಈ ಮೊದಲು 1956ರಲ್ಲಿ ಇಂಗ್ಲೆಂಡ್'ನ ಜಿಮ್ ಲೇಕರ್ ಆಸ್ಟ್ರೇಲಿಯಾ ವಿರುದ್ಧ ಒಂದೇಇನಿಂಗ್ಸ್'ನಲ್ಲಿ ಎಲ್ಲಾ 10 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂಬ ಕೀರ್ತಿಗೆಭಾಜನರಾಗಿದ್ದಾರೆ.