ಪ್ರಸ್ತುತ ಬೌಲರ್'ಗಳ ಪೈಕಿ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಜಗತ್ತಿನ ಶ್ರೇಷ್ಟ ಬೌಲರ್'ಗಳು ಎಂದು ಭಾರತೀಯ ವೇಗಿಗಳನ್ನು ಕೊಂಡಾಡಿದ್ದಾರೆ.
ಬೆಂಗಳೂರು(ಮೇ.18): ಭಾರತದ ಬೌಲಿಂಗ್ ಪಡೆ ಬಲಿಷ್ಟವಾಗಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಗಮನಾರ್ಹ ಪ್ರದರ್ಶನ ತೋರಲಿದೆ ಎಂದು ಶ್ರೀಲಂಕಾ ಮಾಜಿ ವೇಗಿ ಚಮಿಂದಾ ವಾಸ್ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ಬೌಲರ್'ಗಳ ಪೈಕಿ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಜಗತ್ತಿನ ಶ್ರೇಷ್ಟ ಬೌಲರ್'ಗಳು ಎಂದು ಭಾರತೀಯ ವೇಗಿಗಳನ್ನು ಕೊಂಡಾಡಿದ್ದಾರೆ.
ಐಪಿಎಲ್ ಟೂರ್ನಿಗಳಿಂದಾಗಿ ಭಾರತದಲ್ಲಿ ಅತ್ಯುತ್ತಮ ಬೌಲರ್'ಗಳನ್ನು ಬೆಳಕಿಗೆ ಬರುತ್ತಿದ್ದಾರೆ. ಪ್ರಸ್ತುತ ಭಾರತೀಯ ವೇಗದ ಬೌಲಿಂಗ್ ಪಡೆ ಜಗತ್ತಿನ ಶ್ರೇಷ್ಟ ಬೌಲರ್'ಗಳೆನಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅವರು ಫಿಟ್'ನೆಸ್ ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಕುರಿತು ಕುತೂಹಲವಿದೆ ಎಂದು ವಾಸ್ ಹೇಳಿದ್ದಾರೆ.
ಅತಿ ಕಡಿಮೆ ಅವಧಿಯಲ್ಲೇ ಗಮನಾರ್ಹ ಪ್ರದರ್ಶನ ತೋರುತ್ತಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಕೊಂಡಾಡಿರುವ ವಾಸ್, ಬರೋಡದ ಯುವ ವೇಗಿಯನ್ನು ಲಸಿತ್ ಮಾಲಿಂಗ ಹಾಗೂ ಶೇನ್ ಬಾಂಡ್ ಇಬ್ಬರ ಮಿಶ್ರಣ ಎಂದು ಹೇಳಿದ್ದಾರೆ. ಟೀಂ ಇಂಡಿಯಾದಲ್ಲಿ ಬುಮ್ರಾ ಸಾಗುವ ಪಯಣ ಇನ್ನಷ್ಟು ದೂರವಿದೆ ಎಂದವರು ಹೇಳಿದ್ದಾರೆ.