ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭ ುತ್ತಮವಾಗಿರಲಿಲ್ಲ. ಕುಕ್ 27 ರನ್`ಗೆ ನಿರ್ಗಮಿಸಿದರೆ. ಹಮೀದ್ 8 ರನ್`ಗೆ ಸುಸ್ತಾದರು. ಬೈರ್ ಸ್ಟೋ 89 ಮತ್ತು ಜೋಸ್ ಬಟ್ಲರ್ ಗಳಿಸಿದ 43 ರನ್ ಬಿಟ್ಟರೆ ಬೇರಾವ ಬ್ಯಾಟ್ಸ್`ಮನ್`ಗಳು ಭಾರತದ ಬೌಲಿಂಗ್ ದಾಳಿ ಎದುರು ನಿಲ್ಲಲಾಗಲಿಲ್ಲ.
ಮೊಹಾಲಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಭಾರತೀಯ ಬೌಲರ್`ಗಳು ಮೇಲುಗೈ ಸಾಧಿಸಿದ್ದಾರೆ. ಬೈರ್ ಸ್ಟೋ ಗಳಿಸಿದ 89 ರನ್ ಸಹಾಯದಿಂದ ಇಂಗ್ಲೆಂಡ್ ತಂಡ ಮೊದಲ ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 268 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭ ುತ್ತಮವಾಗಿರಲಿಲ್ಲ. ಕುಕ್ 27 ರನ್`ಗೆ ನಿರ್ಗಮಿಸಿದರೆ. ಹಮೀದ್ 8 ರನ್`ಗೆ ಸುಸ್ತಾದರು. ಬೈರ್ ಸ್ಟೋ 89 ಮತ್ತು ಜೋಸ್ ಬಟ್ಲರ್ ಗಳಿಸಿದ 43 ರನ್ ಬಿಟ್ಟರೆ ಬೇರಾವ ಬ್ಯಾಟ್ಸ್`ಮನ್`ಗಳು ಭಾರತದ ಬೌಲಿಂಗ್ ದಾಳಿ ಎದುರು ನಿಲ್ಲಲಾಗಲಿಲ್ಲ.
ಭಾರತೀಯ ಎಲ್ಲ ಬೌಲರ್`ಗಳು ಉತ್ತಮ ಕೌಶಲ್ಯ ತೋರಿದರು. ಉಮೇಶ್ ಯಾದವ್, ಜಯಂತ್ ಯಾದವ್ ಮತ್ತು ಜಡೇಜಾ ತಲಾ 2 ವಿಕೆಟ್ ಉರುಳಿಸಿದರೆ, ಅಶ್ವಿನ್ ಮತ್ತು ಶಮಿ ತಲಾ 1 ವಿಕೆಟ್ ಉರುಳಿಸಿದರು.