ಈ ಮೈದಾನ 60ಮೀ ಉದ್ದ ಹಾಗೆಯೇ 40ಮೀ ಅಗಲವಿದೆ ಜತೆಯಲ್ಲಿ ಬ್ಯಾಟ್ಸ್‌ಮನ್ ಹಿಂದೆ ಕೇವಲ 25 ಗಜ ದೂರ ಒಳಗೊಂಡಿದೆ.

ನವದೆಹಲಿ(ಫೆ.10): ಕೆಲ ದಿನಗಳ ಹಿಂದಷ್ಟೇ ದೆಹಲಿ ಮೂಲದ ಯುವ ಬ್ಯಾಟ್ಸ್‌ಮನ್ ಮೋಹಿತ್ ಅಹ್ಲವಾತ್ ಟಿ20 ಕ್ರಿಕೆಟ್‌'ನಲ್ಲಿ ತ್ರಿಶತಕ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಆದರೆ ಇದೀಗ ಮೋಹಿತ್ ಇತಿಹಾಸ ನಿರ್ಮಿಸಿದ್ದ ಮೈದಾನ ಗಾತ್ರದಲ್ಲಿ ಅತಿ ಚಿಕ್ಕದಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಹೀಗಾಗಿಯೇ ಮೋಹಿತ್ ದಾಖಲೆಯ ತ್ರಿಶತಕಗಳಿಸಲು ಸಾಧ್ಯವಾಯಿತು ಎನ್ನುವ ಮಾತುಗಳು ಕೇಳಿಬಂದಿವೆ.

ಈ ಮೈದಾನ 60ಮೀ ಉದ್ದ ಹಾಗೆಯೇ 40ಮೀ ಅಗಲವಿದೆ ಜತೆಯಲ್ಲಿ ಬ್ಯಾಟ್ಸ್‌ಮನ್ ಹಿಂದೆ ಕೇವಲ 25 ಗಜ ದೂರ ಒಳಗೊಂಡಿದೆ. ಮಣ್ಣಿನ ಮೈದಾನವಾಗಿದ್ದು ಧೂಳಿನಿಂದ ಕೂಡಿದೆ.

ಚಿಕ್ಕದಾದ ಮೈದಾನವಾಗಿರುವುದರಿಂದ ಸುಲಭವಾಗಿ ರನ್‌'ಗಳಿಸಬಹುದಾಗಿದೆ. ಅಹ್ಲವಾತ್ ಕೇವಲ 72 ಎಸೆತಗಳಲ್ಲಿ 300 ರನ್ ಬಾರಿಸಿ ಮಿಂಚಿದ್ದರು. ಅವರ ಸ್ಫೋಟಕ ಇನಿಂಗ್ಸ್'ನಲ್ಲಿ 14 ಬೌಂಡರಿ ಹಾಗೂ 39 ಭರ್ಜರಿ ಸಿಕ್ಸರ್'ಗಳೂ ಸೇರಿದ್ದವು. ಅಹ್ಲವಾತ್ ತಂಡ 20 ಓವರ್'ಗಳಲ್ಲಿ 416ರನ್‌'ಗಳಿಸಿತು. ಆ ನಂತರ ಎದುರಾಳಿ ತಂಡ 15 ಓವರ್‌ಗಳಲ್ಲಿ 216ರನ್‌'ಗಳಿಸಿತ್ತು ಎಂದು ಈ ಮೈದಾನದಲ್ಲಿ ಆಡಿದ ಸ್ಥಳೀಯ ಕ್ಲಬ್‌ನ ಆಟಗಾರರಾದ ಅಹಮದ್ ಅಲಿ ಹೇಳಿದರು. ಅವರನ್ನು ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶಿಸಿದ ವೇಳೆಯಲ್ಲಿ ಈ ಮಾತುಗಳನ್ನಾಡಿದ್ದಾರೆ.

ದಾಖಲೆಯ ತ್ರಿಶತಕ ಬಾರಿಸಿದ ಬೆನ್ನಲ್ಲೇ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಸಿಇಓ ಹೇಮಂತ್ ದುವಾ, ಮೋಹಿತ್ ಅಹ್ಲವಾತ್ ಅವರನ್ನು ತಮ್ಮ ತಂಡದೊಂದಿಗೆ ಅಭ್ಯಾಸ ನಡೆಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.