ತಮ್ಮ ಅದ್ಭುತ ಯಶಸ್ಸಿನ ರಹಸ್ಯವನ್ನೀಗ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಬಹಿರಂಗ ಪಡಿಸಿದ್ದಾರೆ.

ಬೆಂಗಳೂರು(ಫೆ.18): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕಗಳ ಮೇಲೆ ಶತಕಗಳನ್ನು ಬಾರಿಸುತ್ತಾ ಮುನ್ನುಗ್ಗುತ್ತಿದ್ದಾರೆ. ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ ನಾಲ್ಕು ದ್ವಿಶತಕ ಬಾರಿಸಿ ಸರ್. ಡಾನ್ ಬ್ರಾಡ್ಮನ್ ಹಾಗೂ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟುವಲ್ಲಿ ವಿರಾಟ್ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಅದ್ಭುತ ಯಶಸ್ಸಿನ ರಹಸ್ಯವನ್ನೀಗ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಬಹಿರಂಗ ಪಡಿಸಿದ್ದಾರೆ. ತಮ್ಮ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ಪರಮಹಂಸ ಯೋಗಾನಂದರ 'ಆಟೋಬಯೋಗ್ರಫಿ ಆಫ್ ಎ ಯೋಗಿ' ಎನ್ನುವ ಪುಸ್ತಕಕ್ಕೆ ನೀಡಿದ್ದಾರೆ. ಹೌದು ಕ್ರಿಕೆಟಿಗನಾಗಿ ಕೊಹ್ಲಿಯ ಸಂಪೂರ್ಣ ಯಶಸ್ಸಿಗೆ ಈ ಪುಸ್ತಕವೇ ಕಾರಣವೆಂದು ಸ್ವತಃ ವಿರಾಟ್ ಇನ್ಸ್ಟಾಗ್ರಾಂ ನಲ್ಲಿ ಹೇಳಿಕೊಂಡಿದ್ದಾರೆ.

ಇದಷ್ಟೇ ಅಲ್ಲದೇ ದೇಶದ ಜನರು ಈ ಪುಸ್ತಕವನ್ನು ಓದಬೇಕು ಕೊಹ್ಲಿ ಮನವಿ ಮಾಡಿಕೊಂಡಿದ್ದಾರೆ. " ಈ ಪುಸ್ತಕವೆಂದರೆ ಇಷ್ಟ. ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕವಿದು. 'ಆಟೋಬಯೋಗ್ರಫಿ ಆಫ್ ಎ ಯೋಗಿ' ಪುಸ್ತಕವು ಜ್ಞಾನವನ್ನು ಅರಿತುಕೊಂಡು ಅಳವಡಿಸಿಕೊಂಡರೆ ಬದುಕಿನ ದಿಕ್ಕನ್ನೇ ಬದಲಿಸಲಿದೆ" ಎಂದು ದೆಹಲಿ ಮೂಲದ ಕ್ರಿಕೆಟಿಗ ಹೇಳಿದ್ದಾರೆ.