ಟೆಸ್ಟ್, ಒಂಡೇ, ಟಿ20 ಮೂರು ಮಾದರಿ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸರದಾರರು ಯಾರು..? ಹೈಯೆಸ್ಟ್ ಸೆಂಚುರಿ ಹೊಡೆದಿರೋರು ಯಾರು..? ಗರಿಷ್ಠ ಸಿಕ್ಸರ್ ಸರದಾರ ಯಾರು..? ಹೀಗೆ ಯಾವ್ದೇ ಅಂಕಿಅಂಶ ಕೇಳಿದರೂ ಕ್ರಿಕೆಟ್ ಅಭಿಮಾನಿಗಳು ಫಟಾಫಟ್ ಅಂತ ಉತ್ತರಿಸುತ್ತಾರೆ. ಆದರೆ ಈ ಮೂರು ಮಾದರಿಯಲ್ಲಿ ಗರಿಷ್ಠ ಸರಾಸರಿ ಹೊಂದಿರುವ ಆಟಗಾರರು ಯಾರು ಅಂತ ಕೇಳಿರೆ ಯೋಚನೆ ಮಾಡ್ತಾರೆ. ಈಗ ಆ ವಿಷಯ ಯಾಕೆ ಅಂತಿರಾ ಅದಕ್ಕೂ ಕಾರಣವಿದೆ.
ಮುಂಬೈ(ಜು.11): ಟೆಸ್ಟ್, ಒಂಡೇ, ಟಿ20 ಮೂರು ಮಾದರಿ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸರದಾರರು ಯಾರು..? ಹೈಯೆಸ್ಟ್ ಸೆಂಚುರಿ ಹೊಡೆದಿರೋರು ಯಾರು..? ಗರಿಷ್ಠ ಸಿಕ್ಸರ್ ಸರದಾರ ಯಾರು..? ಹೀಗೆ ಯಾವ್ದೇ ಅಂಕಿಅಂಶ ಕೇಳಿದರೂ ಕ್ರಿಕೆಟ್ ಅಭಿಮಾನಿಗಳು ಫಟಾಫಟ್ ಅಂತ ಉತ್ತರಿಸುತ್ತಾರೆ. ಆದರೆ ಈ ಮೂರು ಮಾದರಿಯಲ್ಲಿ ಗರಿಷ್ಠ ಸರಾಸರಿ ಹೊಂದಿರುವ ಆಟಗಾರರು ಯಾರು ಅಂತ ಕೇಳಿರೆ ಯೋಚನೆ ಮಾಡ್ತಾರೆ. ಈಗ ಆ ವಿಷಯ ಯಾಕೆ ಅಂತಿರಾ ಅದಕ್ಕೂ ಕಾರಣವಿದೆ.
ಟಿ20 - ವಿರಾಟ್ ಕೊಹ್ಲಿಯೇ ಬೆಸ್ಟ್ ಸರಾಸರಿ
ವಿರಾಟ್ ಕೊಹ್ಲಿ ಮೂರು ಮಾದರಿ ಕ್ರಿಕೆಟ್'ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅದರಲ್ಲೂ ಟಿ20ಯಲ್ಲಿ ಅವರ ಬ್ಯಾಟಿಂಗ್ ವೈಭವ ಜೋರಾಗಿದೆ. ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧ 39 ರನ್ ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸರಾಸರಿ ಹೊಂದಿರುವ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಹೌದು, ಚುಟುಕು ಕ್ರಿಕೆಟ್'ನಲ್ಲಿ ಕೊಹ್ಲಿಯೇ ಬೆಸ್ಟ್ ಸರಾಸರಿ ಹೊಂದಿರೋದು. ಕೇವಲ 20 ಓವರ್ಗಳ ಆಟ. ಒಂದುವರೆ ತಾಸಿನಲ್ಲಿ ಒಂದು ಇನ್ನಿಂಗ್ಸ್ ಕ್ಲೋಸ್ ಆಗುತ್ತೆ. ಇಂತಹ ಚುಟುಕು ಮಾದರಿಯಲ್ಲಿ ವಿರಾಟ್ 52ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಟಿ20ಯಲ್ಲಿ ಗರಿಷ್ಠ ಸರಾಸರಿ ಹೊಂದಿರುವ ಟಾಪ್-3 ಆಟಗಾರರು ಹೀಗಿದ್ದಾರೆ. 49 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ , 52.96ರ ಸರಾಸರಿ ಹೊಂದಿದ್ದಾರೆ. ಇನ್ನು ಇಂಗ್ಲೆಂಡ್ನ ಜೋ ರೂಟ್ 40.33ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಆರೋನ್ ಫಿಂಚ್ 38.64 ಸರಾಸರಿ ಹೊಂದಿದ್ದಾರೆ.
ಒಂಡೇ - ಟೆನ್ ಡೆಸ್ಕಟ್ ಬೆಸ್ಟ್ ಸರಾಸರಿ
ರಯಾನ್ ಟೆನ್ಡೆಸ್ಕಟ್ ಹೆಸರನ್ನು ಯಾರು ಜಾಸ್ತಿ ಕೇಳಿಲ್ಲ. ಅವರು ಜಾಸ್ತಿ ಕ್ರಿಕೆಟೂ ಆಡಿಲ್ಲ. ಆದರೆ ಆಡಿರುವ ಅಲ್ಲಸ್ವಲ್ಪ ಕ್ರಿಕೆಟ್'ನಲ್ಲಿ ಭಾರೀ ಸದ್ದು ಮಾಡಿ ಹೋಗಿದ್ದಾರೆ. ನೆದರ್ ಲ್ಯಾಂಡ್'ನ ಈ ಪ್ಲೇಯರ್ ಇಂಟರ್ನ್ಯಾಷನಲ್ ಕ್ರಿಕೆಟ್ ಆಡಿದ್ದು ಐದೇ ವರ್ಷ. 33 ಪಂದ್ಯಗಳಲ್ಲಿ ಸಾವಿರ ಚಿಲ್ಲರ್ ರನ್ ಹೊಡೆದಿದ್ದಾರೆ. ಆದರೆ ಇಂಪಾಡೆಂಟ್ ಅದಲ್ಲ. 67ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇದು ಒಂಡೇಯಲ್ಲಿ ಬೆಸ್ಟ್ ಸರಾಸರಿ ಎನಿಸಿದೆ.
ಏಕದಿನ ಕ್ರಿಕೆಟ್ನಲ್ಲಿ ಬೆಸ್ಟ್ ಸರಾಸರಿ ಹೊಂದಿರುವವರು ಇಲ್ಲಿದ್ದಾರೆ. ನೆದರ್ಲ್ಯಾಂಡ್'ನ ರಯಾನ್ ಟೆನ್ಡಸ್ಕೆಟ್ 67 ಸರಾಸರಿ ಹೊಂದಿದ್ದಾರೆ. ಭಾರತದ ವಿರಾಟ್ ಕೊಹ್ಲಿ 54.68 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇನ್ನು ಪಾಕಿಸ್ತಾನದ ಬಾಬಾರ್ ಅಜಾಮ್ 53.88ರ ಸರಾಸರಿಯಲ್ಲಿ ರನ್ ಹೊಡೆದಿದ್ದಾರೆ.
ಟೆಸ್ಟ್ - ಡಾನ್ ಬ್ರಾಡ್ಮನ್
ಟೆಸ್ಟ್ ಕ್ರಿಕೆಟ್'ನಲ್ಲಿ ಡಾನ್ ಬ್ರಾಡ್ಮನ್ ಅವರನ್ನು ಯಾರೂ ಬೀಟ್ ಮಾಡೋಕೆ ಸಾಧ್ಯವಾಗಲ್ಲ ಬಿಡಿ. ಯಾಕಂದ್ರೆ ಅವರ ಸರಾಸರಿ ನೂರಕ್ಕೆ ಪಾಯಿಂಟ್ 6 ಕಮ್ಮಿಯಿದೆ. ಅವರು ತಮ್ಮ ಕೊನೆ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗದಿದ್ದರೆ ಸರಾಸರಿ ಬರೋಬ್ಬರಿ ನೂರು ಇರುತ್ತಿತ್ತು. 70 ವರ್ಷಗಳಿಂದ ಟೆಸ್ಟ್ ಸರಾಸರಿಯಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದಾರೆ. ಬ್ರಾಡ್ಮನ್ ಹತ್ತಿರವೂ ಒಬ್ಬೇ ಒಬ್ಬ ಆಟಗಾರನಿಲ್ಲ. ಇದನ್ನ ನೋಡಿದ್ರೆ ಡಾನ್ ರೆಕಾರ್ಡ್ ಬ್ರೇಕ್ ಆಗೋದು ಕನಸಿನ ಮಾತು.
ಟೆಸ್ಟ್ ಕ್ರಿಕೆಟ್ನಲ್ಲಿ ಬೆಸ್ಟ್ ಸರಾಸರಿ ಹೊಂದಿರುವ ಟಾಪ್-3ಯಲ್ಲಿ ಆಸ್ಟ್ರೇಲಿಯನ್ನರೇ ಇದ್ದಾರೆ. ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ 99.94ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಕಾಂಗರೂ ನಾಡಿನವರೇ ಆದ ಆಡಂ ವೋಗ್ಸ್ 61.87ರ ಸರಾಸರಿಯಲ್ಲಿ ರನ್ ಹೊಡೆದಿದ್ದಾರೆ. ಇನ್ನು ಸದ್ಯ ಆಸೀಸ್ ನಾಯಕ ಸ್ಟೀವನ್ ಸ್ಮಿತ್ 61.05ರ ಸರಾಸರಿಯಲ್ಲಿ ರನ್ ಬಾರಿಸುತ್ತಿದ್ದಾರೆ.
ರಯಾನ್ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕೊಹ್ಲಿ
ಹೌದು, ಏಕದಿನ ಕ್ರಿಕೆಟ್ನಲ್ಲಿ ಬೆಸ್ಟ್ ಸರಾಸರಿ ಬ್ಯಾಟ್ಸ್ಮನ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಚಾನ್ಸ್ ಇದೆ. ಸದ್ಯ ಅವರು 54 ಸರಾಸರಿ ಹೊಂದಿದ್ದಾರೆ. ಟೆನ್ಡಸ್ಕೆಟ್ ಸರಾಸರಿ 67. ಕೊಹ್ಲಿ ಆಡುತ್ತಿರುವ ಫಾರ್ಮ್ ಅನ್ನ ಹಾಗೆ ಮುಂದುವರೆಸಿಕೊಂಡು ಹೋಗಿ, ಸ್ಥಿರ ಪ್ರದರ್ಶನ ನೀಡಿದ್ರೆ ಟಿ20ಯಂತೆ ಒಂಡೆಯಲ್ಲೂ ಬೆಸ್ಟ್ ಸರಾಸರಿ ಅವರ ಹೆಸರಿಗೆ ಬರಲಿದೆ. ಆಲ್ ದ ಬೆಸ್ಟ್ ವಿರಾಟ್.
