ಇಂದು ಆಸ್ಟ್ರೇಲಿಯಾ ತಂಡ ಮ್ಯಾಥ್ಯೂ ವೇಡ್ ಅರ್ಧಶತಕ ಪೂರೈಸುವ ಮೊದಲೇ ಪೆದ್ದು-ಪೆದ್ದಾಗಿ ಸಂಭ್ರಮಿಸಿದ್ದು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.

ಬೆಂಗಳೂರು(ಮಾ.25): ಒಮ್ಮೊಮ್ಮೆ ಕ್ರಿಕೆಟ್'ನಲ್ಲಿ ಹೀಗೂ ಆಗುತ್ತದೆ. ಬ್ಯಾಟ್ಸ್'ಮನ್ ಹಿಟ್ ವಿಕೆಟ್ ಆಗುವುದು, ಅನಾಯಾಸವಾಗಿ ರನೌಟ್ ಆಗುವುದು ಹೀಗೆ ಅನಿರೀಕ್ಷಿತ ಘಟನೆಗಳನ್ನು ಕ್ರಿಕೆಟ್'ನಲ್ಲಿ ನೋಡಿರುತ್ತೇವೆ. ಆದರೆ ಇಂದು ಆಸ್ಟ್ರೇಲಿಯಾ ತಂಡ ಮ್ಯಾಥ್ಯೂ ವೇಡ್ ಅರ್ಧಶತಕ ಪೂರೈಸುವ ಮೊದಲೇ ಪೆದ್ದು-ಪೆದ್ದಾಗಿ ಸಂಭ್ರಮಿಸಿದ್ದು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಷ್ಟಕ್ಕೂ ಆಗಿದ್ದೇನು..?

ಮ್ಯಾಥ್ಯೂ ವೇಡ್ 47 ರನ್ ಗಳಿಸಿದ್ದಾಗ ಅಶ್ವಿನ್ ಎಸೆದ ಚೆಂಡು ಲೈಗ್'ಬೈ ರೂಪದಲ್ಲಿ ಬೌಂಡರಿ ಗೆರೆ ಸೇರಿತು. ಅಂಪೈರ್ ಬೌಂಡರಿ ಎಂದು ತೀರ್ಮಾನ ನೀಡುವುದರೊಳಗೆ ಪೆವಿಲಿಯನ್'ನಲ್ಲಿದ್ದ ಆಸೀಸ್ ಪಡೆ ಚಪ್ಪಾಳೆ ತಟ್ಟಿ ಸಂಭ್ರಮ ಆಚರಿಸತೊಡಗಿತು.. ಆ ನಾಲ್ಕು ರನ್ ಬ್ಯಾಟ್'ನಿಂದ ಬಂದಿದ್ದಲ್ಲ ಎಂದು ಗೊತ್ತಾದ ತಕ್ಷಣ ಸ್ಮಿತ್ ಪಡೆ ಬೆಸ್ತು ಬಿದ್ದಿದ್ದು ನೀವೊಮ್ಮೆ ನೋಡಿ ಎಂಜಾಯ್ ಮಾಡಿ...