ಥಾಯ್ಲೆಂಡ್ ಓಪನ್: ಸಿಂಧು, ಶ್ರೀಕಾಂತ್‌ಗೆ ಸೋಲಿನ ಶಾಕ್
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ, ಶ್ರೀಕಾಂತ್‌ಗೆ ನಿರಾಸೆ
2ನೇ ಸುತ್ತಿಗೆ ಲಕ್ಷ್ಯ ಸೇನ್, ಸೈನಾ ನೆಹ್ವಾಲ್
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ ಶುಭಾರಂಭ

ಬ್ಯಾಂಕಾಕ್(ಜೂ.01): ಭಾರತದ ಅಗ್ರ ಶಟ್ಲರ್ಗಳ 2023ರ ನೀರಸ ಪ್ರದರ್ಶನ ಮುಂದುವರಿದಿದ್ದು, ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದಾರೆ. ಇದೇ ವೇಳೆ ಲಕ್ಷ್ಯ ಸೇನ್, ಸೈನಾ ನೆಹ್ವಾಲ್ ಶುಭಾರಂಭ ಮಾಡಿದ್ದಾರೆ.
ಬುಧವಾರ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಸಿಂಧು, ಕೆನಡಾದ ಮಿಷೆಲ್ ಲೀ ವಿರುದ್ಧ 8-21, 21-18, 18-21 ಗೇಮ್ಗಳಲ್ಲಿ ಸೋತರೆ, 2012ರ ಚಾಂಪಿಯನ್ ಸೈನಾ ಕೆನಡಾದ ವೆನ್ ಯು ಝಾಂಗ್ ವಿರುದ್ಧ 21-13, 21-7ರಲ್ಲಿ ಜಯಗಳಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಚೀನಾದ ಹೊಂಗ್ ಯಾಂಗ್ ವೆಂಗ್ ವಿರುದ್ಧ ಪರಾಭವಗೊಂಡರೆ, ಸೇನ್ ಚೈನೀಸ್ ತೈಪೆಯ ವಾಂಗ್ ತ್ಸು ವೆಯ್ ವಿರುದ್ಧ ಗೆದ್ದರು. ಕಿರಣ್ ಜಾಜ್‌ರ್ ಕೂಡಾ 2ನೇ ಸುತ್ತಿಗೇರಿದರು. ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿಡೆನ್ಮಾರ್ಕ್ನ ಜೋಡಿ ವಿರುದ್ಧ ಗೆದ್ದು ಶುಭಾರಂಭ ಮಾಡಿತು.
ಕಿರಿಯರ ಹಾಕಿ: ಭಾರತ ಫೈನಲ್ಗೆ
ಸಲಾಲ್ಹ(ಒಮಾನ್): 9ನೇ ಆವೃತ್ತಿಯ ಕಿರಿಯರ ಹಾಕಿ ಏಷ್ಯಾಕಪ್ನಲ್ಲಿ 3 ಬಾರಿ ಚಾಂಪಿಯನ್ ಭಾರತ ಫೈನಲ್ಗೆ ಲಗ್ಗೆ ಇಟ್ಟಿದೆ. ಬುಧವಾರ ಮಾಜಿ ಚಾಂಪಿಯನ್ ದಕ್ಷಿಣ ಕೊರಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 9-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿ 6ನೇ ಬಾರಿ ಫೈನಲ್ಗೇರಿತು.
ಗುಂಪು ಹಂತದ 4 ಪಂದ್ಯಗಳಲ್ಲಿ ಬರೋಬ್ಬರಿ 39 ಗೋಲು ದಾಖಲಿಸಿದ್ದ ಭಾರತ ಸೆಮೀಸ್ನಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಬಾಬಿ ಸಿಂಗ್ ಧಾಮಿ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಶಾರ್ದಾನಂದ್, ಅರೈಜಿತ್, ಉತ್ತಮ್, ಅಂಗದ್ಸಿಂಗ್, ಸುನಿತ್, ವಿಷ್ಣುಕಾಂತ್ ತಲಾ 1 ಗೋಲು ಹೊಡೆದರು. ಗುರುವಾರ ಫೈನಲ್ ಪಂದ್ಯ ನಡೆಯಲಿದೆ.
ಇಂದಿನಿಂದ ಮಂಗಳೂರಲ್ಲಿ ಇಂಡಿಯಾ ಸರ್ಫಿಂಗ್ ಕೂಟ
ಮಂಗಳೂರು: 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಅರ್ಹತಾ ಚಾಂಪಿಯನ್‌ಶಿಪ್‌ಗಳಿಗೆ ಪ್ರವೇಶ ಪಡೆಯಲು ಎದುರು ನೋಡುತ್ತಿರುವ ಭಾರತದ ಅಗ್ರ ಸರ್ಫರ್‌ಗಳು ಗುರುವಾರದಿಂದ ಮಂಗಳೂರಿನಲ್ಲಿ ಆರಂಭವಾಗಲಿರುವ 4ನೇ ಆವೃತ್ತಿಯ ಇಂಡಿಯಾ ಓಪನ್ ಸರ್ಫಿಂಗ್ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಲಿದ್ದಾರೆ.
French Open ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್, ರಬೈಕೆನಾ ಶುಭಾರಂಭ
ನಗರದ ಸಸಿಹಿತ್ಲು ಬೀಚ್ ಕೂಟಕ್ಕೆ ಆತಿಥ್ಯ ವಹಿಸಲಿದ್ದು, 4 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಪುರುಷ ಹಾಗೂ ಮಹಿಳೆಯರ ಮುಕ್ತ ವಿಭಾಗ, ಅಂಡರ್-16 ಪುರುಷ, ಮಹಿಳಾ ವಿಭಾಗಗಳ ಸ್ಪರ್ಧೆಯಲ್ಲಿ ಭಾರತದ ಸುಮಾರು 70 ಮಂದಿ ಅಗ್ರ ಸರ್ಫರ್‌ಗಳು ಕಣಕ್ಕಿಳಿಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಭಾರತದ ಅಗ್ರ 10 ಸರ್ಫರ್‌ಗಳ ಪೈಕಿ 7 ಮಂದಿ ಕಣಕ್ಕಿಳಿಯಲಿದ್ದು ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಪುರುಷರ ವಿಭಾಗದಲ್ಲಿ ಸತೀಶ್ ಸರ್ವಣನ್, ರುಬನ್ ವಿ., ಶ್ರೀಕಾಂತ್ ಡಿ., ಸಂಜಯ್‌ಕುಮಾರ್, ಮಣಿಕಂಠನ್, ನಿತೀಶ್ ವರುಣ್, ಸೂರ್ಯ ಪಿ., ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಮಹಿಳಾ ಸರ್ಫರ್‌ಗಳ ಪೈಕಿ ಸೃಷ್ಠಿ ಸೆಲ್ವಂ, ಸಿಂಚನಾ ಗೌಡ, ಶಾಂತಿ ಬನ್ಸಾರೆ ಪ್ರಮುಖರು.
ಕಳೆದ ವರ್ಷದ ರ‍್ಯಾಂಕಿಂಗ್ ಆಧರಿಸಿ ಈಗಾಗಲೇ ನಾಲ್ವರು ಸರ್ಫರ್‌ಗಳು ಎಲ್ ಸಾಲ್ವಡಾರ್ನಲ್ಲಿ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹೃದಯಾಘಾತ: ರಾಜ್ಯದ ವಾಲಿಬಾಲ್ ಪಟು ಸಾವು
ಮಂಗಳೂರು: ಯುವ ವಾಲಿಬಾಲ್ ಪಟು, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಾಲಿಯಾತ್ ಎಂಬವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಪದಂಗಡಿ ಎಂಬಲ್ಲಿನ 24 ವರ್ಷದ ಯುವತಿ ಸಾಲಿಯಾತ್ಗೆ ಬುಧವಾರ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಕಳೆದೊಂದು ವರ್ಷದಿಂದ ಚಿಕ್ಕಮಗಳೂರಿನ ಪತಿ ಮನೆಯಲ್ಲಿ ವಾಸಿಸುತ್ತಿದ್ದ ಸಾಲಿಯಾತ್ ವರ್ಷಗಳ ಹಿಂದೆ ಅಲಹಾಬಾದ್ನಲ್ಲಿ ನಡೆದಿದ್ದ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ ಆಡಿ, ಕರ್ನಾಟಕ ತಂಡ ರನ್ನರ್-ಅಪ್ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.