Asianet Suvarna News Asianet Suvarna News

French Open ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್, ರಬೈ​ಕೆನಾ ಶುಭಾ​ರಂಭ

ಫ್ರೆಂಚ್‌ ಓಪ​ನ್‌ ಟೆನಿ​ಸ್‌ ಗ್ರ್ಯಾಂಡ್‌ಸ್ಲಾಂನಲ್ಲಿ ಇಗಾ, ರಬೈ​ಕೆನಾ ಶುಭಾ​ರಂಭ
2021ರ ಚಾಂಪಿಯನ್‌ ಬಾರ್ಬೊರಾ ಕ್ರೇಜಿಕೋವಾಗೆ ಸೋಲು
ವಿಶ್ವ ನಂ.1 ಸ್ವಿಯಾ​ಟೆಕ್‌, ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ವಿರುದ್ಧ ವಿರುದ್ಧ ಜಯಭೇರಿ

French Open 2023 Iga Swiatek Elena Rybakina play in second round kvn
Author
First Published Jun 1, 2023, 8:24 AM IST

ಪ್ಯಾರಿ​ಸ್‌(ಜೂ.01): ಫ್ರೆಂಚ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿ​ಯಲ್ಲಿ ಹಾಲಿ ಚಾಂಪಿ​ಯನ್‌ ಇಗಾ ಸ್ವಿಯಾಟೆಕ್‌ ಹಾಗೂ 4ನೇ ಶ್ರೇಯಾಂಕಿತೆ ಎಲೈನಾ ರಬೈಕೆನಾ ಶುಭಾ​ರಂಭ ಮಾಡಿ​ದ್ದಾ​ರೆ. ಆದರೆ 2021ರ ಚಾಂಪಿಯನ್‌ ಬಾರ್ಬೊರಾ ಕ್ರೇಜಿಕೋವಾ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನು​ಭ​ವಿ​ಸಿ​ದ್ದಾರೆ.

ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯ​ದಲ್ಲಿ ವಿಶ್ವ ನಂ.1 ಸ್ವಿಯಾ​ಟೆಕ್‌, ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ವಿರುದ್ಧ ವಿರುದ್ಧ 6-4, 6-0 ಅಂತ​ರ​ದಲ್ಲಿ ಗೆಲುವು ಸಾಧಿ​ಸಿ​ದರು. 2ನೇ ಸುತ್ತಿ​ನಲ್ಲಿ ಇಗಾ ಅಮೆ​ರಿ​ಕದ ಕ್ಲೈರ್‌ ಲಿಯು ವಿರುದ್ಧ ಆಡ​ಲಿ​ದ್ದಾರೆ. ಇನ್ನು ಹಾಲಿ ವಿಂಬ​ಲ್ಡನ್‌ ಚಾಂಪಿ​ಯನ್‌, ಕಜ​ಕ​ಸ್ತಾ​ನದ ರಬೈ​ಕೆನಾ ಚೆಕ್‌ ಗಣ​ರಾ​ಜ್ಯದ ಬ್ರೆಂಡಾ ಪ್ರುವಿ​ರ್ಟೋವಾ ಅವ​ರನ್ನು 6-4, 6-2 ಅಂತ​ರ​ದಲ್ಲಿ ಮಣಿ​ಸಿ​ದರು. ಆದರೆ 13ನೇ ಶ್ರೇಯಾಂಕಿತೆ ಕ್ರೇಜಿಕೋವಾ ಉಕ್ರೇ​ನ್‌ನ ಲೆಸಿಯಾ ತ್ಸುರೆಂಕೊ ವಿರುದ್ಧ 2-6, 4-6 ಸೆಟ್‌ಗಳಲ್ಲಿ ಪರಾ​ಭ​ವ​ಗೊಂಡ​ರು.

ಸಿಟ್ಸಿ​ಪಾಸ್‌ 3ನೇ ಸುತ್ತಿ​ಗೆ: ಪುರು​ಷರ ಸಿಂಗ​ಲ್ಸ್‌​ನಲ್ಲಿ 2021ರ ರನ್ನ​ರ್‌-ಅಪ್‌, ಗ್ರೀಕ್‌ನ ಸ್ಟೆಫಾ​ನೊಸ್‌ ಸಿಟ್ಸಿ​ಪಾಸ್‌ ಸ್ಪೇನ್‌ನ ಕ್ಯಾರ್‌​ಬ​ಲೆಸ್‌ ಬೀನಾ ವಿರುದ್ಧ ಗೆದ್ದು 3ನೇ ಸುತ್ತಿ​ಗೇ​ರಿ​ದರು. 3ನೇ ಶ್ರೇಯಾಂಕಿತ ಅಮೆ​ರಿ​ಕದ ಜೆಸ್ಸಿಕಾ ಪೆಗುಲಾ ಮಹಿಳಾ ಸಿಂಗ​ಲ್ಸ್‌​ನಲ್ಲಿ 3ನೇ ಸುತ್ತು ತಲು​ಪಿ​ದರು.

ಸಾಕೇ​ತ್‌-ಯೂಕಿ 2ನೇ ಸುತ್ತಿಗೆ ಲಗ್ಗೆ!

ಪುರು​ಷರ ಡಬ​ಲ್ಸ್‌​ನಲ್ಲಿ ಕಣ​ಕ್ಕಿ​ಳಿ​ದಿದ್ದ ಭಾರತ ತಾರಾ ಜೋಡಿ ಸಾಕೇತ್‌ ಮೈನೇನಿ ಹಾಗೂ ಯೂಕಿ ಭಾಂಬ್ರಿ 2ನೇ ಸುತ್ತಿಗೆ ಲಗ್ಗೆ ಇಟ್ಟಿ​ದ್ದಾರೆ. ಬುಧ​ವಾರ ಮೊದಲ ಸುತ್ತಿ​ನಲ್ಲಿ ಫ್ರಾನ್ಸ್‌ನ ಎನ್ಜೋ ಕೊಯು​ಕಾ​ಡ್‌-ಆರ್ಥರ್‌ ರಿಂಡೆ​ರ್ನೆಕ್‌ ವಿರುದ್ಧ 6-3, 6-2 ಸೆಟ್‌​ಗ​ಳಿಂದ ಜಯ​ಗ​ಳಿ​ಸಿದರು. ಆದರೆ ಜೀವನ್‌ ಹಾಗೂ ಶ್ರೀರಾಮ್‌ ಬಾಲಾ​ಜಿಗೆ ಮೊದಲ ಸುತ್ತಿ​ನಲ್ಲೇ ಸೋಲು ಎದು​ರಾ​ಯಿತು. ಈ ಜೋಡಿ ಬೆಲಾ​ರು​ಸ್‌ನ ಇಲ್ಯಾ ಇವಾ​ಷ್ಕಾ-ಆಸ್ಪ್ರೇ​ಲಿ​ಯಾದ ಅಲೆಕ್ಸಿ ಪೋಪಿ​ರಿನ್‌ ವಿರುದ್ಧ 6-3, 6-4 ನೇರ ಸೇಟ್‌ಗಳಿಂದ ಪರಾ​ಭ​ವ​ಗೊಂಡಿತು.

French Open: ಜೋಕೋ​ವಿಚ್‌ 2ನೇ ಸುತ್ತಿ​ಗೆ ಲಗ್ಗೆ

ರಾಜ​ಕೀಯ ಹೇಳಿಕೆ: ಮತ್ತೆ ವಿವಾ​ದದಲ್ಲಿ ಜೋಕೋ​ವಿ​ಚ್‌

ಪ್ಯಾರಿ​ಸ್‌: 22 ಗ್ರ್ಯಾನ್‌ಸ್ಲಾಂಗಳ ಒಡೆಯ, ಸರ್ಬಿ​ಯಾ​ದ ನೋವಾಕ್‌ ಜೋಕೋ​ವಿಚ್‌ ರಾಜ​ಕೀಯ ವಿಚಾರದ ಮೂಲಕ ಫ್ರೆಂಚ್‌ ಓಪ​ನ್‌​ನಲ್ಲಿ ವಿವಾ​ದ​ವನ್ನು ಮೈಮೇಲೆ ಎಳೆ​ದು​ಕೊಂಡಿದ್ದು, ಟೆನಿಸ್‌ ವಿಶ್ವ ಫೆಡ​ರೇ​ಶ​ನ್‌​(​ಐ​ಟಿ​ಎ​ಫ್‌) ಹಾಗೂ ಫ್ರಾನ್ಸ್‌ ಕ್ರೀಡಾ ಸಚಿ​ವಾ​ಲ​ಯ​ದಿಂದ ಎಚ್ಚ​ರಿ​ಕೆಗೆ ಗುರಿ​ಯಾ​ಗಿ​ದ್ದಾ​ರೆ. ಕೊಸೊವೊ ಪ್ರದೇಶ 2008ರಲ್ಲೇ ಸರ್ಬಿ​ಯಾ​ದಿಂದ ಸ್ವತಂತ್ರ​ಗೊಂಡ​ರೂ, ಇದನ್ನು ಸರ್ಬಿಯಾ ಒಪ್ಪು​ತ್ತಿಲ್ಲ ಮತ್ತು ಆಗಾಗ ಘರ್ಷ​ಣೆ​ಗಳು ನಡೆ​ಯು​ತ್ತಲೇ ಇದೆ. 

ಈ ಬಗ್ಗೆ ತಮ್ಮ ಮೊದಲ ಸುತ್ತಿನ ಗೆಲು​ವಿನ ಬಳಿಕ ಜೋಕೋ ಕ್ಯಾಮ​ರಾ​ದಲ್ಲಿ ‘ಕೊಸೊವೊ ಸರ್ಬಿ​ಯಾದ ಹೃದಯವಿದ್ದಂತೆ. ಹಿಂಸೆ ನಿಲ್ಲಿ​ಸಿ’ ಎಂದು ಬರೆ​ದಿ​ದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತ​ವಾ​ಗಿದ್ದು, ಜೋಕೋ ಟೆನಿಸ್‌ ನಿಯಮ ಮೀರ​ಬಾ​ರದು. ರಾಜ​ಕೀ​ಯ​ಗ​ಳಿಂದ ದೂರ​ವಿ​ರ​ಬೇಕು ಎಂದು ಐಟಿ​ಎಫ್‌ ತಾಕೀತು ಮಾಡಿದೆ.

Follow Us:
Download App:
  • android
  • ios