ಕಾನ್ಪುರ(ಸೆ.22): ಭಾರತ ತಂಡದ ಮಾಜಿ ನಾಯಕರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಎಂಎಸ್ ಧೋನಿ ಮುಂತಾದವರನ್ನು ಭಾರತದ 500ನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉತ್ತರಪ್ರದೇಶದ ರಾಜ್ಯಪಾಲರು ಮಾಜಿ ಟೆಸ್ಟ್ ತಂಡದ ನಾಯಕರುಗಳಿಗೆ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸುನಿಲ್ ಗವಾಸ್ಕರ್, ಕಪಿಲ್ ದೇವ್, ಎಂಎಸ್ ಧೋನಿ ಮಾತ್ರವಲ್ಲದೆ ಉಳಿದ ನಾಯಕರುಗಳಾದ ಅಜಿತ್ ವಾಡೇಕರ್, ರವಿ ಶಾಸ್ತ್ರಿ, ದಿಲೀಪ್ ವೆಂಗ್'ಸರ್ಕಾರ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ, ಕೆ.ಶ್ರೀಕಾಂತ್, ಮೊಹಮ್ಮದ್ ಅಜರ್'ದ್ದೀನ್ ಹಾಗೂ ಹಾಲಿ ನಾಯಕ ವಿರಾಟ್ ಕೊಹ್ಲಿ ಕೂಡ ಗೌರವಕ್ಕೆ ಪಾತ್ರರಾದರು.
ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಈ ವೇಳೆ ಹಾಜರಿದ್ದರು.
ಬುಧವಾರ ರಾತ್ರಿ ಮಾಜಿ ಟೆಸ್ಟ್' ಕ್ರಿಕೆಟ್ ನಾಯಕರಿಗೆ ಔತಣಕೂಟವನ್ನು ಆಯೋಜಿಸಲಾಗಿತ್ತು. ಔತಣಕೂಟದಲ್ಲಿ ಟೀಂ ಇಂಡಿಯಾ ಆಟಗಾರರು ಭಾಗವಹಿಸಿದ್ದರು.
