US ಓಪನ್ 2019: 3ನೇ ಸುತ್ತಿಗೇರಿದ ಸೆರೆನಾ
ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಮೊದಲ ಸೆಟ್‌ನಲ್ಲಿ ತಮ್ಮ ದೇಶದ ಆಟಗಾರ್ತಿ ಎದುರೇ ಆಘಾತ ಅನುಭವಿಸಿದ ಸೆರೆನಾ ಆ ಬಳಿಕ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನ್ಯೂಯಾರ್ಕ್(ಆ.30): 23 ಗ್ರ್ಯಾಂಡ್‌ಸ್ಲಾಂ ಒಡತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಯುಎಸ್ ಓಪನ್ ಗ್ರ್ಯಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ದಿಗ್ಗಜ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್!
7ನೇ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿರುವ ಸೆರೆನಾ, ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ತಮ್ಮವರೇ ಆದ ಕ್ಯಾಟಿ ಮೆಕ್‌ನ್ಯಾಲೆ ವಿರುದ್ಧ 5-7, 6-3, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್'ನಲ್ಲಿ 5-7ರಿಂದ ಹಿನ್ನಡೆ ಅನುಭವಿಸಿದ್ದ ಸೆರೆನಾ ಮುಂದಿನ ಎರಡೂ ಸೆಟ್‌ಗಳನ್ನು ಸುಲಭದಲ್ಲಿ ಮುನ್ನಡೆ ಪಡೆದು ಪಂದ್ಯ ಗೆದ್ದರು. ಉಳಿದಂತೆ ಆ್ಯಶ್ಲೆ
ಬಾರ್ಟಿ, ಮ್ಯಾಡಿಸನ್ ಕೀಸ್ 3ನೇ ಸುತ್ತು ಪ್ರವೇಶಿಸಿದರು.
ಪಿ.ವಿ ಸಿಂಧು ಬಯೋಪಿಕ್; ಪುಲ್ಲೇಲ ಪಾತ್ರಕ್ಕೆ ಬಾಲಿವುಡ್ ಹೀರೋ!
ಗೆದ್ದ ಫೆಡರರ್, ಜೊಕೊವಿಚ್: ಹಾಲಿ ಚಾಂಪಿಯನ್ ನೊವಾಕ್ ಜೋಕೋವಿಚ್ ಭುಜದ ನೋವಿನ ಹೊರತಾಗಿಯೂ ಮೂರನೇ ಸುತ್ತನ್ನು ಪ್ರವೇಶಿಸಿದರು. ಸ್ವಿಜರ್‌ಲೆಂಡ್ ತಾರೆ ರೋಜರ್ ಫೆಡರರ್ ನಿಧಾನಗತಿ ಆರಂಭದಿಂದ ಪುಟಿದೇಳುವ ಮೂಲಕ ಮೂರನೇ ಸುತ್ತಿಗೆ ಲಗ್ಗೆಯಿಟ್ಟರು. ಕಳೆದ 5 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗಳಲ್ಲಿ 4ನ್ನೂ ಗೆದ್ದಿರುವ ಜೋಕೋವಿಚ್ ಅತ್ಯುತ್ತಮ ಲಯದಲ್ಲಿದ್ದಾರೆ. ಅರ್ಜೆಂಟೀನಾ ಎದುರಾಳಿ ಜುವಾನ್ ಇಗ್ನಾಸಿಯೊ ಲೊಂಡೆರೊ ವಿರುದ್ಧ 6-4, 7-6 (7-3), 6-1 ಸೆಟ್ ಅಂತರದಿಂದ ಪಂದ್ಯ ಗೆದ್ದರು.