37 ವರ್ಷದ ಆಟಗಾರನಿಗಿದು ಇಲ್ಲಿ 9ನೇ ಪ್ರಶಸ್ತಿ. ಫೈನಲ್‌ನಲ್ಲಿ ರೊಮೇನಿಯಾದ ಮರಿಯಲ್ ಕೊಪಿಲ್ ವಿರುದ್ಧ 7-6(7/5), 6-4 ಸೆಟ್‌ಗಳಲ್ಲಿ ಜಯಗಳಿಸಿದರು. 2006ರಲ್ಲಿ ಇಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದ ಫೆಡರರ್‌ಗಿದು, ಸ್ವಿಸ್ ಓಪನ್‌ನಲ್ಲಿ ಸತತ 20ನೇ ಪಂದ್ಯ ಗೆಲುವು. ಜತೆಗೆ ಸತತ 12 ಬಾರಿ ಫೈನಲ್'ನಲ್ಲಿ ಆಡಿದ್ದಾರೆ. 

ಬೆಸೆಲ್[ಅ.30]: ರೋಜರ್ ಫೆಡರರ್ ಪ್ರಶಸ್ತಿಗಳ ‘ಸೆಂಚುರಿ’ ಬಾರಿಸುವ ಹೊಸ್ತಿಲಲ್ಲಿದ್ದಾರೆ. ಭಾನುವಾರ ಇಲ್ಲಿ ನಡೆದ ಸ್ವಿಸ್ ಒಳಾಂಗಣ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆದ ಫೆಡರರ್, ತಮ್ಮ ಪ್ರಶಸ್ತಿ ಗೆಲುವುಗಳ ಸಂಖ್ಯೆಯನ್ನು 99ಕ್ಕೇರಿಸಿಕೊಂಡರು.

37 ವರ್ಷದ ಆಟಗಾರನಿಗಿದು ಇಲ್ಲಿ 9ನೇ ಪ್ರಶಸ್ತಿ. ಫೈನಲ್‌ನಲ್ಲಿ ರೊಮೇನಿಯಾದ ಮರಿಯಲ್ ಕೊಪಿಲ್ ವಿರುದ್ಧ 7-6(7/5), 6-4 ಸೆಟ್‌ಗಳಲ್ಲಿ ಜಯಗಳಿಸಿದರು. 2006ರಲ್ಲಿ ಇಲ್ಲಿ ಮೊದಲ ಬಾರಿಗೆ
ಪ್ರಶಸ್ತಿ ಗೆದ್ದಿದ್ದ ಫೆಡರರ್‌ಗಿದು, ಸ್ವಿಸ್ ಓಪನ್‌ನಲ್ಲಿ ಸತತ 20ನೇ ಪಂದ್ಯ ಗೆಲುವು. ಜತೆಗೆ ಸತತ 12 ಬಾರಿ ಫೈನಲ್'ನಲ್ಲಿ ಆಡಿದ್ದಾರೆ. 

Scroll to load tweet…

ಈ ಋತುವಿನಲ್ಲಿ ಫೆಡರರ್‌ಗಿದು 4ನೇ ಪ್ರಶಸ್ತಿ. ಈ ವರ್ಷ ಆಸ್ಟ್ರೇಲಿಯನ್ ಓಪನ್, ರೋಟರ್ ಡ್ಯಾಮ್ ಹಾಗೂ ಸ್ಟುಟ್‌ಗಾರ್ಟ್ ಓಪನ್‌ನಲ್ಲಿ ಫೆಡರರ್ ಟ್ರೋಫಿ ಎತ್ತಿಹಿಡಿದಿದ್ದರು. ಈ ವರ್ಷದಂತ್ಯದ ವೇಳೆಗೆ 100ನೇ ಪ್ರಶಸ್ತಿ ಗೆಲ್ಲುವ ಗುರಿ ಫೆಡರರ್‌ದಾಗಿದೆ. 109 ಪ್ರಶಸ್ತಿಗಳೊಂದಿಗೆ ಅಮೆರಿಕದ ಜಿಮ್ಮಿ ಕಾನ್ಸರ್ ಗರಿಷ್ಠ ಪ್ರಶಸ್ತಿ ವಿಜೇತ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಫೆಡರರ್ ಶೀಘ್ರ ವಿಶೇಷ ಕ್ಲಬ್‌ಗೆ ಸೇರ್ಪಡೆಗೊಳ್ಳುವ ವಿಶ್ವಾಸದಲ್ಲಿದ್ದಾರೆ. ಇದೇ ವಾರ ನಡೆಯಲಿರುವ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ರೋಜರ್ ಆಡುವ ನಿರೀಕ್ಷೆ ಇದೆ.