ಪ್ಯಾರಿಸ್‌[ನ.03]: ಟೆನಿಸ್‌ ವೃತ್ತಿ ಜೀವನದಲ್ಲಿ 100ನೇ ಪ್ರಶಸ್ತಿ ಗೆಲ್ಲಲು ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ಗೆ ಇನ್ನು ಕೇವಲ 3 ಗೆಲುವು ಮಾತ್ರ ಬೇಕಿದೆ. 

ಪ್ಯಾರಿಸ್‌ ಮಾಸ್ಟರ್ಸ್ ಟೂರ್ನಿಯಲ್ಲಿ ಆಡುತ್ತಿರುವ ಫೆಡರರ್‌, ಗುರುವಾರ ನಡೆದ ಪ್ರಿಕ್ವಾರ್ಟರ್‌ನಲ್ಲಿ, ಇಟಲಿಯ ಫ್ಯಾಬಿಯೋ ಫೋಗ್ನಿನಿ ಅವರನ್ನು 6-4, 6-3 ನೇರ ಸೆಟ್‌ಗಳಿಂದ ಮಣಿಸಿದರು. 

37 ವರ್ಷದ ಫೆಡರರ್‌, ಇತ್ತೀಚೆಗಷ್ಟೇ ಸ್ವಿಸ್‌ ಓಪನ್‌ ಚಾಂಪಿಯನ್‌ ಆಗುವ ಮೂಲಕ 99ನೇ ಪ್ರಶಸ್ತಿ ಜಯಿಸಿದ್ದರು. ವಿಶ್ವ ನಂ.3 ಫೆಡರರ್‌, 3 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ಯಾರಿಸ್‌ ಮಾಸ್ಟರ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ.