ಡೇವಿಸ್ ಕಪ್ ಟೆನಿಸ್: ಕ್ರೊವೇಷಿಯಾಗೆ ಚಾಂಪಿಯನ್ ಪಟ್ಟ

ಇಲ್ಲಿ ನಡೆದ ಫೈನಲ್’ನಲ್ಲಿ ಫ್ರಾನ್ಸ್ ವಿರುದ್ಧ 3-1ರ ಅಂತರದಲ್ಲಿ ಗೆದ್ದ ಕ್ರೊವೇಷಿಯಾ 2005ರ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಡೇವಿಸ್ ಕಪ್ ಟೂರ್ನಿಯಲ್ಲಿ ಕ್ರೊವೇಷಿಯಾಕ್ಕಿದು ಎರಡನೇ ಪ್ರಶಸ್ತಿಯಾಗಿದೆ.

Tennis Marin Cilic leads Croatia to Davis Cup title against France

ಲಿಲ್ಲಿ[ನ.26]: ಟೆನಿಸ್ ವಿಶ್ವಕಪ್ ಎಂದೇ ಕರೆಸಿಕೊಳ್ಳುವ ಡೇವಿಸ್ ಕಪ್’ನ 2018ರ ಚಾಂಪಿಯನ್ ಆಗಿ ಕ್ರೊವೇಷಿಯಾ ಹೊರಹೊಮ್ಮಿದೆ.

ಇಲ್ಲಿ ನಡೆದ ಫೈನಲ್’ನಲ್ಲಿ ಫ್ರಾನ್ಸ್ ವಿರುದ್ಧ 3-1ರ ಅಂತರದಲ್ಲಿ ಗೆದ್ದ ಕ್ರೊವೇಷಿಯಾ 2005ರ ಬಳಿಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಡೇವಿಸ್ ಕಪ್ ಟೂರ್ನಿಯಲ್ಲಿ ಕ್ರೊವೇಷಿಯಾಕ್ಕಿದು ಎರಡನೇ ಪ್ರಶಸ್ತಿಯಾಗಿದೆ.

ಸಿಂಗಲ್ಸ್ ಪಂದ್ಯಗಳಲ್ಲಿ ಸೋಲುಂಡಿದ್ದ ಫ್ರಾನ್ಸ್, ಡಬಲ್ಸ್’ನಲ್ಲಿ ಗೆದ್ದು ಅಂತರವನ್ನು 1-2ಕ್ಕಿಳಿಸಿಕೊಂಡಿತ್ತು. ಆದರೆ ರಿವರ್ಸ್ ಸಿಂಗಲ್ಸ್ ಪಂದ್ಯದಲ್ಲಿ ಮರಿನ್ ಸಿಲಿಚ್ ಗೆಲ್ಲುವ ಮೂಲಕ ಕ್ರೊವೇಷಿಯಾಗೆ 3-1ರ ಅಂತರದ ಗೆಲುವು ದಾಖಲಿಸಿತು. 

ಫ್ರಾನ್ಸ್ ಎದುರು 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಸೋತಿದ್ದ ಕ್ರೊವೇಷಿಯಾ, ಇದೀಗ ಟೆನಿಸ್ ವಿಶ್ವಕಪ್ ಎಂದೇ ಹೆಸರಾದ ಡೇವಿಸ್ ಕಪ್ ಗೆಲ್ಲುವ ಮೂಲಕ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದೆ. 

Latest Videos
Follow Us:
Download App:
  • android
  • ios