ATP Rankings : 18 ವರ್ಷಗಳ ಬಳಿಕ ಟಾಪ್-10ನಿಂದ ರಾಫೆಲ್ ನಡಾಲ್ ಔಟ್..!
* ನೂತನ ಟೆನಿಸ್ ವಿಶ್ವ ರ‍್ಯಾಂಕಿಂಗ್ ಪಟ್ಟಿ ಪ್ರಕಟ
* 18 ವರ್ಷಗಳ ಬಳಿಕ ಟಾಪ್ 10 ಪಟ್ಟಿಯಿಂದ ರಾಫೆಲ್ ನಡಾಲ್ ಔಟ್
* ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯಲ್ಲಿ ರಾಫೆಲ್ ನಡಾಲ್ 13ನೇ ಸ್ಥಾನಕ್ಕೆ ಕುಸಿತ
ಲಂಡನ್(ಮಾ.21): 22 ಗ್ರ್ಯಾನ್ ಸ್ಲಾಂಗಳ ಒಡೆಯ, ಸ್ಪೇನ್‌ನ ರಾಫೆಲ್ ನಡಾಲ್ 2005ರ ಬಳಿಕ ಮೊದಲ ಬಾರಿಗೆ ಟೆನಿಸ್ ವಿಶ್ವ ರ‍್ಯಾಂಕಿಂಗ್ ಪಟ್ಟಿಯ ಅಗ್ರ-10ರಿಂದ ಹೊರಬಿದ್ದಿದ್ದಾರೆ. ಸೋಮವಾರ ಪ್ರಕಟಗೊಂಡ ಪರಿಷ್ಕೃತ ರ‍್ಯಾಂಕಿಂಗ್ ಪಟ್ಟಿಯಲ್ಲಿ ರಾಫೆಲ್ ನಡಾಲ್ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಪ್ರೇಲಿಯಾ ಓಪನ್ ವೇಳೆ ಸೊಂಟದ ಗಾಯದಿಂದ ಬಳಲಿದ್ದ ನಡಾಲ್, ಇಂಡಿಯಾನಾ ವೆಲ್ಸ್, ಮಯಾಮಿ ಓಪನ್ ಸೇರಿ ಇನ್ನೂ ಕೆಲ ಪ್ರಮುಖ ಟೂರ್ನಿಗಳಿಗೆ ಗೈರಾದ ಕಾರಣ ರ‍್ಯಾಂಕಿಂಗ್ ಅಂಕಗಳನ್ನು ಕಳೆದುಕೊಂಡರು.
2005ರ ಏಪ್ರಿಲ್ 25ರಿಂದ 2023ರ ಮಾರ್ಚ್ 20ರ ವರೆಗೂ ಸತತ 934 ವಾರಗಳ ಕಾಲ ನಡಾಲ್ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಅತಿಹೆಚ್ಚು ಸಮಯ ಅಗ್ರ-10ರಲ್ಲಿ ಸ್ಥಾನ ಉಳಿಸಿಕೊಂಡ ಪುರುಷ ಟೆನಿಸಿಗ ಎನ್ನುವ ದಾಖಲೆ ನಡಾಲ್ ಹೆಸರಿನಲ್ಲಿದೆ. ಒಟ್ಟಾರೆಯಾಗಿ ಈ ದಾಖಲೆ ಅಮೆರಿಕದ ದಿಗ್ಗಜೆ ಮಾರ್ಟಿನಾ ನವ್ರಾಟಿಲೋವಾ ಹೆಸರಿನಲ್ಲಿದೆ. ಮಾರ್ಟಿನಾ ಸತತವಾಗಿ 1000 ವಾರಗಳ ಕಾಲ ಅಗ್ರ-10ರಲ್ಲಿ ಉಳಿದಿದ್ದರು.
ಇಂದಿನಿಂದ ಸ್ಪಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ
ಬಸೆಲ್: ಕಳಪೆ ಲಯದಲ್ಲಿರುವ ಭಾರತೀಯ ಶಟ್ಲರ್‌ಗಳು 2023ರಲ್ಲಿ ಮೊದಲ ಪ್ರಶಸ್ತಿ ಗೆಲುವಿಗಾಗಿ ಹುಡುಕಾಟ ಮುಂದುವರಿಸಿದ್ದು, ಮಂಗಳವಾರದಿಂದ ಆರಂಭಗೊಳ್ಳಲಿರುವ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕ್ವಾರ್ಟರ್‌ಗೆ ಲವ್ಲೀನಾ, ಸಾಕ್ಷಿ
ಹಾಲಿ ಚಾಂಪಿಯನ್ ಪಿ.ವಿ.ಸಿಂಧು ಕಳೆದ ವಾರ ನಡೆದ ಆಲ್ ಇಂಗ್ಲೆಂಡ್ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋಲುಂಡಿದ್ದರು. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ಥಳೀಯ ಆಟಗಾರ್ತಿ ಜೆನ್ಜಿರಾ ವಿರುದ್ಧ ಆಡಲಿದ್ದಾರೆ. ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್, ಎಚ್.ಎಸ್.ಪ್ರಣಯ್ ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ ಮೇಲೆ ನಿರೀಕ್ಷೆ ಇದೆ.
ಕೊಡವ ಹಾಕಿ: ಪೊನ್ನೋಲ ತಂಡ, ಪುಲಿಯಂಡ, ವಾಟೇರಿರಕ್ಕೆ ಜಯ
ನಾಪೋಕ್ಲು: ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಸಾರಥ್ಯದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ 2ನೇ ದಿನವಾದ ಸೋಮವಾರ ಪೊನ್ನೋಲತಂಡ, ಪುಲಿಯಂಡ ತಂಡಗಳು ಭರ್ಜರಿ ಗೆಲುವು ಸಾಧಿಸಿದವು.
ಕಟ್ಟಂಡ (ಅಮ್ಮತ್ತಿ) ತಂಡದ ವಿರುದ್ಧ ಪೊನ್ನೋಲ ತಂಡ 6-4 ಗೋಲುಗಳ ಗೆಲುವು ಪಡೆದರೆ, ವಾಟೆರಿರ ಮತ್ತು ನಂದಿನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಾಟೇರಿರ ತಂಡ 4-0 ಅಂತರದ ಜಯ ಸಾಧಿಸಿತು. ಉಳಿದಂತೆ ಕುಪ್ಪಂಡ ತಂಡದ ವಿರುದ್ಧ ನಾಗಂಡ 1-0, ಪಾಲೆಂಗಡ ತಂಡ ವಿರುದ್ಧ ಮದ್ರೀರ ತಂಡ 3-0, ಬಾದುಮಂಡ ತಂಡ ವಿರುದ್ಧ ತಂಬುಕುತ್ತಿರ 2-0 ಗೋಲುಗಳ ಅಂತರದಲ್ಲಿ ಗೆಲುವು ಪಡೆಯಿತು.
ಇನ್ನು, ಓಡಿಯಂಡ ತಂಡದ ವಿರುದ್ಧ ಪುಲಿಯಂಡ ತಂಡ 6-0 ಅಂತರದ ದೊಡ್ಡ ಗೆಲುವು ಸಾಧಿಸಿ ಸಂಭ್ರಮಿಸಿತು. ಕಂಜಿತಂಡ ಮತ್ತು ಚೋಕಂಡ ತಂಡಗಳ ನಡುವೆ ನಡೆದ ಪಂದ್ಯದ ಫಲಿತಾಂಶ ಶೂಟೌಟ್‌ನಲ್ಲಿ ನಿರ್ಧಾರವಾಯಿತು. ಶೂಟೌಟ್‌ನಲ್ಲಿ ಕಂಜಿತಂಡ ತಂಡ 4-3 ಅಂತರದ ಗೆಲುವು ಸಾಧಿಸಿತು. ಉಳಿದಂತ ಮೂಡೇರ, ಕಾಂಗೀರ, ನಂಬುಡಮಾಡ, ಪಟ್ಟಮಾಡ, ಐಚಂಡ ತಂಡಗಳು ಜಯಗಳಿಸಿದವು.