ದ್ವಿತೀಯಾರ್ಧದ ಆರಂಭದಲ್ಲೇ ಟೈಟಾನ್ಸ್, ಎದುರಾಳಿಯನ್ನು ಆಲೌಟ್ ಮಾಡಿ 17-12ರಿಂದ ಮುನ್ನಡೆ ಪಡೆಯಿತು.

ಮುಂಬೈ(ಆ.31): ಸಾಕಷ್ಟು ರೋಚಕತೆಯಿಂದ ಕೂಡಿದ್ದ ತೆಲುಗುಟೈಟಾನ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ರಾಹುಲ್ ಚೌಧರಿ ಪಡೆ 33-28 ಅಂಕಗಳ ಅಂತರದಿಂದ ಜಯಭೇರಿ ಬಾರಿಸಿದೆ.

Add Asianetnews Kannada as a Preferred SourcegooglePreferred

ಇಲ್ಲಿನ ಎನ್‌'ಎಸ್‌'ಸಿಐ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ, ತೆಲುಗು ತಂಡ ಆಕ್ರಮಣಕಾರಿಯಾಟ ಪ್ರದರ್ಶಿಸಿತು. ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ತೋರುತ್ತಾ ನಿರಾಸೆ ಅನುಭವಿಸಿರುವ ಉಭಯ ತಂಡಗಳು ಗೆಲುವಿಗಾಗಿ ಹುಡುಕಾಟ ನಡೆಸುತ್ತಿದ್ದವು. ತಲೈವಾಸ್ ವಿರುದ್ಧದ ಗೆಲುವು ರಾಹುಲ್ ಬಳಗದ ಆತ್ಮವಿಶ್ವಾಸ ಹೆಚ್ಚಿಸಿದೆ.

ಅಜಯ್ ಠಾಕೂರ್ ಹಾಗೂ ಪ್ರಪಂಜನ್ ಅವರ ಯಶಸ್ವಿ ರೈಡಿಂಗ್‌'ನಿಂದ ತಲೈವಾಸ್ ಮೊದಲ 4 ನಿಮಿಷಗಳಲ್ಲಿ 3-0 ಮುನ್ನಡೆ ಪಡೆಯಿತು. ಟೈಟಾನ್ಸ್ 5ನೇ ನಿಮಿಷದಲ್ಲಿ ತನ್ನ ಖಾತೆ ತೆರೆಯಿತು. ರಕ್ಷಣಾ ಪಡೆಯ ಪ್ರಭಾವಿ ಆಟದ ನೆರವಿನಿಂದ ಟೈಟಾನ್ಸ್ 7ನೇ ನಿಮಿಷದಲ್ಲಿ 5-5 ರಲ್ಲಿ ಸಮಬಲ ಸಾಧಿಸಿತು. ಮೊದಲಾರ್ಧದ ಮುಕ್ತಾಯಕ್ಕೆ ಟೈಟಾನ್ಸ್ 12-10ರಿಂದ ಮುನ್ನಡೆ ಸಾಧಿಸಿತು.

ದ್ವಿತೀಯಾರ್ಧದ ಆರಂಭದಲ್ಲೇ ಟೈಟಾನ್ಸ್, ಎದುರಾಳಿಯನ್ನು ಆಲೌಟ್ ಮಾಡಿ 17-12ರಿಂದ ಮುನ್ನಡೆ ಪಡೆಯಿತು. ಐದು ನಿಮಿಷದಲ್ಲಿ 10 ಅಂಕಗಳಿಸಿದ ತಲೈವಾಸ್ 37ನೇ ನಿಮಿಷದ ವೇಳೆಗೆ ಅಂತರವನ್ನು 26-28ಕ್ಕಿಳಿಸಿತು. ಪಂದ್ಯ ಮುಕ್ತಾಯಕ್ಕೆ ಕೊನೆಯ ಎರಡು ನಿಮಿಷ ಬಾಕಿ ಇದ್ದಾಗ ಕೇವಲ 1 ಅಂಕ ಹಿಂದಿದ್ದ ಚೆನ್ನೈ ತಂಡ ರಾಹುಲ್ ಚೌಧರಿಗೆ 39ನೇ ನಿಮಿಷದಲ್ಲಿ ನಿರ್ಣಾಯಕ ಅಂಕ ಬಿಟ್ಟುಕೊಟ್ಟಿತು. ಕೊನೆ ನಿಮಿಷದಲ್ಲಿ 2 ಟ್ಯಾಕಲ್ ಅಂಕ ಪಡೆದ ಟೈಟಾನ್ಸ್ 5 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು.