ವೆಸ್ಟ್ಇಂಡೀಸ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ವಿಚಾರ ಇದೀಗ ಹಲವು ತಿರುವು ಪಡೆದುಕೊಳ್ಳುತ್ತಿದೆ. ಆಯ್ಕೆಯಿಂದ ಮುನಿಸಿಕೊಂಡಿರುವ ಶಿಖರ್ ಧವನ್ ಪತ್ನಿ, ನಾಯಕ ವಿರಾಟ್ ಕೊಹ್ಲಿ ಪತ್ನಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಅನ್ನೋ ವರದಿಗಳು ಹೊರಬಿದ್ದಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. 

ರಾಜ್‌ಕೋಟ್(ಅ.04): ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಮುಕ್ತಾಯಗೊಂಡಿದೆ. ಆದರೆ ಟೀಂ ಇಂಡಿಯಾ ಆಯ್ಕೆ ವಿಚಾರದ ಚರ್ಚೆ ಮಾತ್ರ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣುತ್ತಿಲ್ಲ. ಕನ್ನಡಿಗ ಕರುಣ್ ನಾಯರ್ ಕೈಬಿಟ್ಟ ವಿವಾದ ತಣ್ಣಗಾಗುತ್ತಲೇ ಇದೀಗ ಶಿಖರ್ ಧವನ್ ಆಯ್ಕೆ ಕುರಿತು ವಿವಾದ ಹುಟ್ಟಿಕೊಂಡಿದೆ.

Add Asianetnews Kannada as a Preferred SourcegooglePreferred

ಜಡೇ ಜಗಳ ಟೀಂ ಇಂಡಿಯಾಗೂ ಕಾಲಿಟ್ಟಿದೆಯಾ? ಹೌದು ಅಂತಿದೆ ವರದಿಗಳು. ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಶಿಖರ್ ಧವನ್‌ಗೆ ಕೊಕ್ ನೀಡಲಾಗಿದೆ. ಈ ನಿರ್ಧಾರದಿಂದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಹಾಗೂ ಶಿಖರ್ ಧವನ್ ಪತ್ನಿ ಆಯೇಶಾ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ ಎಂದು ದೈನಿಕ್ ಜಾಗ್ರನ್ ವರದಿ ಮಾಡಿದೆ.

ಟೀಂ ಇಂಡಿಯಾದ ಕೆಲ ಮೀಟಿಂಗ್‌ಗಳಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ಪಾಲ್ಗೊಂಡಿದ್ದಾರೆ ಅನ್ನೋದು ದೈನಿಕ್ ಜಾಗ್ರನ್ ವರದಿ ಮಾಡಿದೆ. ಹೀಗಾಗಿ ಧವನ್ ಪತ್ನಿ ಆಯೇಶಾ ಮುಖರ್ಜಿ, ಕೊಹ್ಲಿ ಪತ್ನಿ ಮೇಲೆ ಮುನಿಸಿಕೊಂಡಿದ್ದಾರೆ ಎಂದಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ಹಾಗೂ ಪಾಕಿಸ್ತಾನ ವಿರುದ್ಧ ಸೆಂಚುರಿ ಸಿಡಿಸೋ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇಷ್ಟಾದರೂ ಧವನ್ ಆಯ್ಕೆಯಾಗಿಲ್ಲ ಅನ್ನೋದು ಪತ್ನಿ ಅಯೇಶಾ ಸಿಟ್ಟಿಗೆ ಕಾರಣವಾಗಿದೆ ಎನ್ನಲಾಗ್ತಿದೆ.