ಮೊಹಾಲಿ[ಮಾ.10]: ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಏಕದಿನ ಪಂದ್ಯಕ್ಕೆ ಮೊಹಾಲಿ ಆತಿಥ್ಯ ವಹಿಸಿದ್ದು, ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 2-1ರ ಮುನ್ನಡೆ ಸಾಧಿಸಿದೆ.

ಭಾರತ ತಂಡವು ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿದ್ದು, ಮಹೇಂದ್ರ ಸಿಂಗ್ ಧೋನಿ ವಿಶ್ರಾಂತಿ ಪಡೆದಿದ್ದರಿಂದ ರಿಷಭ್ ಪಂತ್ ತಂಡ ಕೂಡಿಕೊಂಡಿದ್ದಾರೆ. 2005ರ ಬಳಿಕ ಇದೇ ಮೊದಲ ಬಾರಿಗೆ ಧೋನಿ ಇಲ್ಲದೇ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಕಣಕ್ಕಿಳಿಯುತ್ತಿದೆ. ಇನ್ನು ಕನ್ನಡಿಗ ಕೆ.ಎಲ್ ರಾಹುಲ್, ಭುವನೇಶ್ವರ್ ಕುಮಾರ್ ಹಾಗೂ ಯುಜುವೇಂದ್ರ ಚಹಲ್ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದು, ರಾಯುಡು, ಶಮಿ ಹಾಗೂ ಜಡೇಜಾಗೆ ರೆಸ್ಟ್ ನೀಡಲಾಗಿದೆ. 

ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮಾರ್ಕಸ್ ಸ್ಟೋನಿಸ್ ಬದಲಿಗೆ ಆಸ್ಟನ್ ಟರ್ನರ್ ತಂಡ ಕೂಡಿಕೊಂಡಿದ್ದಾರೆ. 

ತಂಡಗಳು ಹೀಗಿವೆ:

ಭಾರತ:

ಆಸ್ಟ್ರೇಲಿಯಾ: