ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 75 ರನ್`ಗಳ ಅದ್ಬುತ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನ 4-0 ಅಂತರದಿಂದ ಗೆದ್ದುಕೊಂಡಿದೆ.
ಚೆನ್ನೈ(ಡಿ.20): ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 75 ರನ್`ಗಳ ಅದ್ಬುತ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನ 4-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್`ನಲ್ಲಿ ಟೀಮ್ ಇಂಡಿಯಾ ಪಡೆದಿದ್ದ 282 ರನ್`ಗಳ ಲೀಡ್ ಮೀರಲೂ ಇಂಗ್ಲೆಂಡ್ ಬ್ಯಾಟ್ಸ್`ಮನ್`ಗಳಿಗೆ ಸಾಧ್ಯವಾಗಲಿಲ್ಲ. 7 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಗೆಲುವಿನ ರೂವಾರಿಯಾದರು.
ಭಾರತದ 282 ರನ್`ಗಳ ಲೀಡ್`ಗೆ ಪ್ರತಿಯಾಗಿ 2ನೇ ಇನ್ನಿಂಗ್ಸ್ ಬ್ಯಾಂಟಿಂಗ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಕ್ಯಾಚ್ ಡ್ರಾಪ್ ಮಾಡಿದ ಲಾಭವನ್ನ ಬಳಸಿಕೊಂಡ ನಾಯಕ ಅಲಿಸ್ಟರ್ ಕುಕ್ 49 ರನ್ ಗಳಿಸಿದರೆ, ಜೆನ್ನಿಂಗ್ಸ್ 54 ರನ್ ಸಿಡಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್`ನ ಪತನ ಆರಂಭವಾಯಿತು.ಭಾರತದ ಬೌಲಿಂಗ್ ದಾಳಿ ಎದುರು ಆಂಗ್ಲರು ಪರದಾಡಿದರು.
ಭೋಜನ ವಿರಾಮದ ಬಳಿಕ ದಿಕ್ಕು ಬದಲಿಸಿದ ಜಡೇಜಾ: ಭೋಜನ ವಿರಾಮಕ್ಕೂ ಮುನ್ನ ಇಂಗ್ಲೆಂಡ್ 4 ವಿಕೆಟ್`ಗಳನ್ನಷ್ಟೇ ಕಳೆದುಕೊಂಡಿತ್ತು. ಭೋಜನದ ಬಳಿಕ ಫ್ಲಾಟ್ ಪಿಚ್`ನಲ್ಲೂ ರವೀಂದ್ರ ಜಡೇಜಾರ ಸ್ಪಿನ್ ದಾಳಿಗೆ ಆಂಗ್ಲರ ಬಳಿ ಉತ್ತರವೇ ಇರಲಿಲ್ಲ. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಜಡೇಜಾ ಡ್ರಾ ಎನ್ನಲಾಗುತ್ತಿದ್ದ ಪಂದ್ಯವನ್ನ ಗೆಲುವಿನ ಟ್ರ್ಯಾಕ್`ಗೆ ತಂದು ನಿಲ್ಲಿಸಿದರು. ಕೇವಲ 48 ರನ್ ನೀಡಿ 7 ವಿಕೆಟ್ ಉರುಳಿಸಿದ ಜಡೇಜಾ ಗೆಲುವಿನ ರೂವಾರಿಯಾದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 477 ಮತ್ತು 207
ಭಾರತ 759/7 ಡಿಕ್ಲೇರ್
ಬ್ಯಾಟಿಂಗ್:
ಕೆ.ಎಲ್. ರಾಹುಲ್ - 199 ರನ್
ಕರುಣ್ ನಾಯರ್ - ಅಜೇಯ 303 ರನ್
ಬೌಲಿಂಗ್:
ರವೀಂದ್ರ ಜಡೇಜಾ - 48/7
ಫಲಿತಾಂಶ: ಭಾರತಕ್ಕೆ ಇನ್ನಿಂಗಸ್್ ಮತ್ತು 75 ರನ್ ಜಯ
.
