Asianet Suvarna News Asianet Suvarna News

ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ- ತಂಡದಲ್ಲಿ 1 ಬದಲಾವಣೆ!

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಆರಂಭಗೊಂಡಿದೆ. ಉಭಯ ತಂಡಗಳು ತಲಾ ಒಂದು ಬದಲಾವಣೆ ಮಾಡಿದೆ. ಹಾಗಾದರೆ ತಂಡ ಸೇರಿಕೊಂಡಿರುವ ಆಟಗಾರ ಯಾರು? ಇಲ್ಲಿದೆ.

Team India  wins the toss and Elects to bat first against the Windies in the 2nd ODI
Author
Bengaluru, First Published Oct 24, 2018, 1:44 PM IST
  • Facebook
  • Twitter
  • Whatsapp

ವಿಶಾಖಪಟ್ಟಣಂ(ಅ.24): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವೇಗಿ ಖಲೀಲ್ ಅಹಮ್ಮದ್ ಬದಲು, ಸ್ಪಿನ್ನರ್ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಲಾಗಿದೆ.

 

 

ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಲು ಸಜ್ಜಾಗಿರುವ ವೆಸ್ಟ್ ಇಂಡೀಸ್ ಕೂಡ ಒಂದು ಬದಲಾವಣೆ ಮಾಡಿದೆ ಒಶಾನೆ ಥೋಮಸ್ ಬದಲು ಒಬೆಡ್ ಮೆಕ್‌ಕೊಯ್ ಪದಾರ್ಪಣೆ ಮಾಡಿದ್ದಾರೆ.

 

 

ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಆರಂಭಿಕರಾದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಎಚ್ಚರಿಕೆಯ ಬ್ಯಾಟಿಂಗ್ ಮುಂದಾಗಿದ್ದರು. ಆದರೆ ರೋಹಿತ್ ಶರ್ಮಾ 4 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 15 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದೆ.

Follow Us:
Download App:
  • android
  • ios