West Indies

(Search results - 476)

Aaron Finch

CricketJul 20, 2021, 4:35 PM IST

ಆ್ಯರೋನ್‌ ಫಿಂಚ್ ಔಟ್‌, ಅಲೆಕ್ಸ್‌ ಕ್ಯಾರಿಗೆ ಆಸೀಸ್‌ ನಾಯಕ ಪಟ್ಟ

ಕಳೆದ ಶುಕ್ರವಾರ ಸೇಂಟ್‌ ಲೂಸಿಯಾದಲ್ಲಿ ವೆಸ್ಟ್‌ ಇಂಡೀಸ್ ವಿರುದ್ದದ 5ನೇ ಟಿ20 ಪಂದ್ಯದಲ್ಲಿ ಪಾಲ್ಗೊಂಡಿದ್ದಾಗ ಆ್ಯರೋನ್‌ ಫಿಂಚ್ ಮೊಣಕಾಲು ಗಾಯಕ್ಕೆ ಒಳಗಾಗಿದ್ದರು. ಅವರ ಫಿಟ್ನೆಸ್‌ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಗಮನಿಸುತ್ತಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

Mitchell Marsh

CricketJul 15, 2021, 4:56 PM IST

4ನೇ ಟಿ20: ಮಿಚೆಲ್‌ ಮಾರ್ಶ್‌ ಆಲೌಟ್‌ ಆಟಕ್ಕೆ ತಲೆಬಾಗಿದ ವಿಂಡೀಸ್‌

ನಾಲ್ಕನೇ ಟಿ20 ಪಂದ್ಯ ಆರಂಭಕ್ಕೂ ಮುನ್ನವೇ ವೆಸ್ಟ್ ಇಂಡೀಸ್ ತಂಡವು 3-0 ಅಂತರದಲ್ಲಿ ಟಿ20 ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ನಾಯಕ ಆ್ಯರೋನ್‌ ಫಿಂಚ್‌ ಆಕರ್ಷಕ ಅರ್ಧಶತಕ(53) ಹಾಗೂ ಮಿಚೆಲ್ ಮಾರ್ಶ್‌(75) ಬಾರಿಸಿದ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 189 ರನ್‌ ಬಾರಿಸಿತ್ತು.

ರಾಷ್ಟ್ರಪತಿ ಭಾರತದ ಮೊದಲ ಪ್ರಜೆ. ಇದೀಗ ರಾಮನಾಥ್ ಕೋವಿಂದ್ ಸ್ವತ 5 ಲಕ್ಷ ರೂಪಾಯಿ ದೇಣಿಗೆ ನೀಡೋ ಮೂಲಕ ದೇಣಿಕೆ ಸಂಗ್ರಹ ಪ್ರಕ್ರಿಯೆಗೆ ಮತ್ತಷ್ಟು ಚಾಲನೆ ನೀಡಿದ್ದಾರೆ ಎಂದರು.

NewsJul 13, 2021, 4:31 PM IST

ಬಿಜೆಪಿಗೆ ಅನಿವಾರ್ಯವಾಗ್ತಿದೆ ಮೈತ್ರಿ, ಧರ್ಮ ಬದಲಿಸಿದ್ರಾ ಸೈಫ್ ಪುತ್ರಿ?ಜು.13ರ ಟಾಪ್ 10 ಸುದ್ದಿ!

ಕೊರೋನಾ ಸ್ಥಿತಿಗತಿ ಕುರಿತು ಪ್ರಧಾನಿ ನರೇಂದ್ರ ಮೋದಿ, ಬಿಎಸ್ ಯಡಿಯೂರಪ್ಪ ಸೇರಿ 6 ರಾಜ್ಯದ ಮುಖ್ಯಮಂತ್ರಿ ಜೊತೆ ಸಭೆ ನಡೆಸಲಿದ್ದಾರೆ. ರಾಷ್ಟ್ರಪತಿ ಆಯ್ಕೆಗೆ ಬಿಜೆಪಿಗೆ ಮೈತ್ರಿ ಅನಿವಾರ್ಯವಾಗುತ್ತಿದೆ. ಕರ್ನಾಟಕದಲ್ಲೂ ಜನಸಂಖ್ಯಾ ನಯಂತ್ರಣ ನೀತಿ ತರಲು ಇದು ಸಕಾಲ ಎಂದು ಸಿಟಿ ರವಿ ಹೇಳಿದ್ದಾರೆ. ಧರ್ಮ ಬದಲಾಯಿಸಿದರಾ ಸೈಫ್ ಪುತ್ರಿ ಸಾರಾ, ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ಸೇರಿದಂತೆ ಜು.13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Chris Gayle

CricketJul 13, 2021, 12:15 PM IST

ಕ್ರಿಸ್ ಗೇಲ್‌ ಅಬ್ಬರ, ಆಸೀಸ್‌ ಎದುರು ಟಿ20 ಸರಣಿ ವಿಂಡೀಸ್ ಪಾಲು

ಮೊದಲು ಬ್ಯಾಟ್ ಮಾಡಿದ ಪ್ರವಾಸಿ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 141 ರನ್‌ ಕಲೆಹಾಕಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು ಇನ್ನೂ 31 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ವಿಂಡೀಸ್‌ ನಾಯಕ ನಿಕೋಲಸ್ ಪೂರನ್‌ 27 ಎಸೆತಗಳಲ್ಲಿ ಅಜೇಯ 32 ರನ್‌ ಬಾರಿಸುವ ಮೂಲಕ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು.

Daren sammy

CricketJul 11, 2021, 7:30 PM IST

ಭಾರತದ Fun88 ಬ್ರಾಂಡ್ ಅಂಬಾಸಿಡರ್‌ ಆಗಿ ನೇಮಕೊಂಡ ಡರೆನ್ ಸಾಮಿ!

• ಕ್ರೀಡಾ ಪ್ಲಾಟ್‌ಫಾರಂ Fun88   ಬ್ರಾಂಡ್ ಅಂಬಾಸಿಡರ್‌ ನೇಮಕ
• ಭಾರತದ ಕ್ರೀಡಾ ಫ್ಲಾಟ್‌ಫಾರ್ಮ್‌ಗೆ ಡರೆನ್ ಸಾಮಿ ಅಂಬಾಸಿಡರ್

Andre Russell

CricketJul 10, 2021, 3:29 PM IST

ಟಿ20 ಕ್ರಿಕೆಟ್: ಆಸೀಸ್ ಎದುರು ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್

ಗೆಲ್ಲಲು 146 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಸುಲಭವಾಗಿಯೇ ಗುರಿ ಮುಟ್ಟಲಿದೆ ಎಂದು ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು. 116 ರನ್‌ಗಳವರೆಗೆ ಕೇವಲ 5 ವಿಕೆಟ್ ಕಳೆದುಕೊಂಡಿದ್ದ ಕಾಂಗರೂ ಪಡೆ ಆ ಬಳಿಕ ತನ್ನ ಖಾತೆಗೆ ಕೇವಲ 10 ರನ್‌ ಸೇರಿಸುವಷ್ಟರಲ್ಲಿ ಇನ್ನುಳಿದ 5 ವಿಕೆಟ್ ಕಳೆದುಕೊಂಡು ಆಘಾತಕಾರಿ ಸೋಲು ಅನುಭವಿಸಿತು.

South Africa Cricket

CricketJul 5, 2021, 11:28 AM IST

ವಿಂಡೀಸ್ ಎದುರು ಟಿ20 ಸರಣಿ ಗೆದ್ದ ಹರಿಣಗಳು

ಮೊದಲ 4 ಟಿ20 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದ್ದ ಉಭಯ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಖಾತೆ ತೆರೆಯುವ ಮುನ್ನವೇ ನಾಯಕ ತೆಂಬ ಬವುಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Kieron Pollard

CricketJul 2, 2021, 12:35 PM IST

ಪೊಲ್ಲಾರ್ಡ್‌-ಬ್ರಾವೋ ಮಿಂಚಿನಾಟಕ್ಕೆ ತಲೆಬಾಗಿದ ಹರಿಣಗಳು

ಮೊದಲ ಬ್ಯಾಟ್‌ ಮಾಡಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಲಿಂಡ್ಲ್‌ ಸಿಮನ್ಸ್‌(47) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರು ಕೇವಲ 3 ರನ್‌ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಲೆವಿಸ್‌, ಗೇಲ್ ಹಾಗೂ ಹೆಟ್ಮೇಯರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಕೆರಿಬಿಯನ್‌ ಪಾಳಯದಲ್ಲಿ ಆತಂಕ ಮನೆಮಾಡಿತ್ತು.

Michael Holding

CricketJun 28, 2021, 4:41 PM IST

ವರ್ಣಭೇದ ನೀತಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಕ್ರಿಕೆಟ್ ದಿಗ್ಗಜ ಮೈಕೆಲ್ ಹೋಲ್ಡಿಂಗ್

ವಿಂಡೀಸ್ ಪರ 60 ಟೆಸ್ಟ್ ಪಂದ್ಯಗಳನ್ನಾಡಿ 249 ವಿಕೆಟ್ ಕಬಳಿಸಿರುವ ಮೈಕೆಲ್ ಹೋಲ್ಡಿಂಗ್ ತಮ್ಮ ಹೊಸ ಪುಸ್ತಕ, 'Why We Kneel, How We Rise' ಪುಸ್ತಕದಲ್ಲಿ ವರ್ಣಭೇದ ನೀತಿಯ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Keshav Maharaj

CricketJun 22, 2021, 9:11 AM IST

ವಿಂಡೀಸ್ ಎದುರು ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಕೇಶವ್ ಮಹಾರಾಜ್

ಸೋಮವಾರ ನಡೆದ ಪಂದ್ಯದ 4ನೇ ದಿನದಾಟದಲ್ಲಿ ಮಹಾರಾಜ್‌, ವಿಂಡೀಸ್‌ 2ನೇ ಇನ್ನಿಂಗ್ಸ್‌ನ 37ನೇ ಓವರಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ವಿಂಡೀಸ್‌ನ ಕೀರನ್‌ ಪೋವೆಲ್‌, ಜೇಸನ್‌ ಹೋಲ್ಡರ್‌ ಹಾಗೂ ಜೋಶ್ವಾ ಡಾ ಸಿಲ್ವಾರನ್ನು ಸತತ 3 ಎಸೆತಗಳಲ್ಲಿ ಔಟ್‌ ಮಾಡಿ, ಮಹಾರಾಜ್‌ ಹ್ಯಾಟ್ರಿಕ್‌ ಸಾಧಿಸಿದರು.

Aaron Finch

CricketJun 16, 2021, 11:33 AM IST

ವಿಂಡೀಸ್, ಬಾಂಗ್ಲಾ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ; ಸ್ಟಾರ್ ಆಟಗಾರರು ಗೈರು..!

ಗ್ಲೆನ್ ಮ್ಯಾಕ್ಸ್‌ವೆಲ್‌, ಜೇ ರಿಚರ್ಡ್‌ಸನ್‌, ಕೇನ್ ರಿಚರ್ಡ್‌ಸನ್‌, ಡೇನಿಯಲ್ ಸ್ಯಾಮ್ಸ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್‌ ವಿವಿಧ ಕಾರಣ ನೀಡಿ ಮುಂಬರುವ ಈ ಎರಡು ವಿದೇಶಿ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸಬೇಡಿ ಆಸ್ಟ್ರೇಲಿಯಾ ಆಯ್ಕೆ ಸಮಿತಿಯ ಮುಂದೆ ಮನವಿ ಮಾಡಿಕೊಂಡಿದ್ದರು.

Kagiso Rabada

CricketJun 14, 2021, 11:36 AM IST

ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ಎದುರು ವಿಂಡೀಸ್‌ಗೆ ಹೀನಾಯ ಸೋಲು..!

ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಕೇವಲ 97 ರನ್‌ಗೆ ಆಲೌಟ್‌ ಆಗಿತ್ತು. ಲುಂಗಿ ಎಂಗಿಡಿ ಟೆಸ್ಟ್‌ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 5 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ನೊಕಿಯೆ 4 ವಿಕೆಟ್ ಕಬಳಿಸಿ ವಿಂಡೀಸ್ ತಂಡವನ್ನು ಮೂರಂಕಿ ಮೊತ್ತದೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

quinton de kock

CricketJun 12, 2021, 3:31 PM IST

ಅಜೇಯ 141 ಚಚ್ಚಿದ ಕ್ವಿಂಟನ್ ಡಿ ಕಾಕ್; ಹರಿಣಗಳ ಹಿಡಿತದಲ್ಲಿ ವಿಂಡೀಸ್

ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೇ ದಿನದಾಟದಲ್ಲಿ ಡಿ ಕಾಕ್ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡಿ ಕಾಕ್ 170 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 141 ರನ್ ಚಚ್ಚಿದರು.

Lungi Ngidi

CricketJun 11, 2021, 1:20 PM IST

ಮೊದಲ ಟೆಸ್ಟ್: ಎಂಗಿಡಿ ಮಾರಕ ದಾಳಿಗೆ ವಿಂಡೀಸ್‌ 97ಕ್ಕೆ ಆಲೌಟ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌ ತಂಡಕ್ಕೆ ಎಂಗಿಡಿ ತಮ್ಮ ಮಾರಕ ದಾಳಿಯ ಮೂಲಕ ಶಾಕ್ ನೀಡಿದರು.2018ರಲ್ಲಿ ಭಾರತ ವಿರುದ್ದ ಪಾದಾರ್ಪಣೆ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಎಂಗಿಡಿ, ಇದೀಗ ಎರಡನೇ ಬಾರಿಗೆ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಎಂಗಿಡಿಗೆ ದಕ್ಷಿಣ ಆಫ್ರಿಕಾದ ಮತ್ತೋರ್ವ ವೇಗಿ ನೊಕಿಯೆ ಉತ್ತಮ ಸಾಥ್ ನೀಡಿದ ಪರಿಣಾಮ ವೆಸ್ಟ್ ಇಂಡೀಸ್‌ ಕೇವಲ 40.5 ಓವರ್‌ಗಳಲ್ಲಿ ಸರ್ವಪತನ ಕಂಡಿತು.

West Indies Cricket

CricketJun 9, 2021, 1:46 PM IST

ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ

2020ರ ಅಂಡರ್ 19 ವಿಶ್ವಕಪ್‌ ತಂಡದ ಆಟಗಾರನಾಗಿದ್ದ ಜೇಡನ್ ಸೇಲ್ಸ್, ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದು ಟ್ರಿನಿಡ್ಯಾಡ್ & ಟೊಬ್ಯಾಗೋ ತಂಡದ ಮಾರಕ ವೇಗಿಗೆ ಮಣೆ ಹಾಕಲಾಗಿದೆ. ಇದಷ್ಟೇ ಅಲ್ಲದೇ ಅಗ್ರಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ಶಾಯ್ ಹೋಪ್ ಹಾಗೂ ಕೀರನ್ ಪೋವೆಲ್‌ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.