ಮೂರನೇ ಪಂದ್ಯ ರಾಂಚಿಯಲ್ಲಿ ಇದೇ 16ರಿಂದ ಶುರುವಾದರೆ, 25ರಿಂದ ಧರ್ಮಶಾಲಾದಲ್ಲಿ ಕೊನೆಯ ಹಾಗೂ ನಾಲ್ಕನೇ ಪಂದ್ಯ ನಡೆಯಲಿದೆ.

ಮುಂಬೈ(ಮಾ.09): ಬಾರ್ಡರ್-ಗವಾಸ್ಕರ್ ಟ್ರೋಫಿಯ ಇನ್ನುಳಿದ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಾಯಾಳು ಹಾರ್ದಿಕ್ ಪಾಂಡ್ಯ ಅವರನ್ನು ಹೊರತುಪಡಿಸಿ ತಂಡದಲ್ಲಿ ಯಾವುದೇ ಬದಲಾವಣೆಯನ್ನೂ ಟೀಂ ಇಂಡಿಯಾ ಆಯ್ಕೆಸಮಿತಿ ಮಾಡಿಲ್ಲ.

ಮೂರನೇ ಪಂದ್ಯ ರಾಂಚಿಯಲ್ಲಿ ಇದೇ 16ರಿಂದ ಶುರುವಾದರೆ, 25ರಿಂದ ಧರ್ಮಶಾಲಾದಲ್ಲಿ ಕೊನೆಯ ಹಾಗೂ ನಾಲ್ಕನೇ ಪಂದ್ಯ ನಡೆಯಲಿದೆ.

ಪುಣೆ ಟೆಸ್ಟ್ ಅನ್ನು 333 ರನ್‌ಗಳಿಂದ ಜಯಿಸಿ ಆ ಮೂಲಕ 13 ವರ್ಷಗಳ ಬಳಿಕ ಆಸೀಸ್ ಭಾರತದಲ್ಲಿ ಗೆಲುವಿನ ನಗೆಬೀರಿತ್ತು. ಆದರೆ ಬೆಂಗಳೂರು ಟೆಸ್ಟ್ ಅನ್ನು 75 ರನ್‌'ಗಳಿಂದ ಗೆದ್ದ ಟೀಂ ಇಂಡಿಯಾ ನಾಲ್ಕು ಪಂದ್ಯ ಸರಣಿಯನ್ನು 1-1ರಿಂದ ಸಮಬಲ ಮಾಡಿಕೊಂಡಿದೆ.

ಪ್ರಕಟಿತ ತಂಡ ಇಂತಿದೆ:

ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ವೃದ್ದಿಮಾನ್ ಸಾಹ (ವಿಕೆಟ್‌ಕೀಪರ್), ಇಶಾಂತ್ ಶರ್ಮಾ, ಉಮೇಶ್ ಯಾದವ್, ಜಯಂತ್ ಯಾದವ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್ ಮತ್ತು ಅಭಿನವ್ ಮುಕುಂದ್.