ಪ್ರತಿ ಸರಣಿ ಹಾಗೂ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರ ಅಭ್ಯಾಸ ಹೇಗಿರುತ್ತೆ? ಈ ಕುರಿತು ತಂಡದ ಬ್ಯಾಟಿಂಗ್ ಕೋಚ್ ವಿವರಿಸಿದ್ದಾರೆ. ಹಾಗಾದರೆ ತಂಡದ ಟ್ರೈನಿಂಗ್ ಸೆಶನ್ ಹೇಗಿದೆ? ಇಲ್ಲಿದೆ ವೀಡಿಯೋ.

ಲ್ಡ್ ಟ್ರಾಫೋರ್ಡ್(ಜು.01): ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್‌ನಲ್ಲಿ ಅಭ್ಯಾಸ ಆರಂಭಿಸಿದೆ. ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದ ಬಳಿಕ ಇಂಗ್ಲೆಂಡ್‌ಗೆ ತಲುಪಿರುವ ಭಾರತ ತಂಡ ಒಲ್ಡ್ ಟ್ರಾಫೋರ್ಡ್‌ನಲ್ಲಿ ಅಭ್ಯಾಸ ಆರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಗ್ಲೆಂಡ್ ವಿರುದ್ಧದ 3 ಟಿ20 ಪಂದ್ಯಗಳ ಪೈಕಿ ಮೊದಲ ಪಂದ್ಯ ಒಲ್ಡ್ ಟ್ರಾಫೋರ್ಡ್‌ನಲ್ಲಿ ನಡೆಯಲಿದೆ. ಹೀಗಾಗಿ ಭಾರತ ತಂಡ ಕಠಿಣ ಅಭ್ಯಾಸ ಆರಂಭಿಸಿದೆ. ಟೀಂ ಇಂಡಿಯಾದ ಟ್ರೈನಿಂಗ್ ಸೆಶನ್ ಹೇಗಿರುತ್ತೆ? ಅನ್ನೋದನ್ನ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ವಿವರಿಸಿದ್ದಾರೆ.

View post on Instagram

ತಂಡದ ಪ್ರತಿಯೊಬ್ಬ ಆಟಗಾರ ಟ್ರೈನಿಂಗ್ ಸೆಶನ್‌ನಲ್ಲಿ ಎನು ಮಾಡಬೇಕು. ಅಭ್ಯಾಸ ಹೇಗಿರಬೇಕು? ಎಷ್ಟು ಹೊತ್ತು ಪ್ರಾಕ್ಟೀಸ್ ಮಾಡಬೇಕು ಅನ್ನೋ ವಿವರವನ್ನ ಬಂಗಾರ್ ಹೇಳಿದ್ದಾರೆ. ಜುಲೈ 3 ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಆರಂಭಗೊಳ್ಳಲಿದೆ. 3 ಟಿ30, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳ ಸುದೀರ್ಘ ಸರಣಿಗಾಗಿ ಭಾರತ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿದೆ.

View post on Instagram