Asianet Suvarna News Asianet Suvarna News

BCCI ಸಂದರ್ಶನಕ್ಕೆ ಜಾಂಟಿ ರೋಡ್ಸ್ ಹಾಜರ್

ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಬಿಸಿಸಿಐ ಆಯೋಜಿಸಿದ್ದ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Team India support staff selection Jonty Rhodes incumbents appear for interviews
Author
Mumbai, First Published Aug 21, 2019, 11:05 AM IST
  • Facebook
  • Twitter
  • Whatsapp

ಮುಂಬೈ(ಆ.21): ಭಾರತ ಕ್ರಿಕೆಟ್‌ ತಂಡದ ಸಹಾಯಕ ಸಿಬ್ಬಂದಿ ನೇಮಕ ಪ್ರಕ್ರಿಯೆಯಲ್ಲಿ ತೊಡಗಿರುವ ಎಂ.ಎಸ್‌.ಕೆ.ಪ್ರಸಾದ್‌ ನೇತೃತ್ವದ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ, ಮಂಗಳವಾರ 16 ಸದಸ್ಯರ ಸಂದರ್ಶನ ನಡೆಸಿತು. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಸಂದರ್ಶನ ಕರೆಯಲಾಗಿತ್ತು.

ರಸೆಲ್‌ ಡೊಮಿಂಗೊ ಬಾಂಗ್ಲಾ ಕ್ರಿಕೆಟ್‌ನ ಹೊಸ ಕೋಚ್‌

ಹಾಲಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌, ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಆ್ಯಂಟಿಗಾದಿಂದ ಸ್ಕೈಪ್‌ ಮೂಲಕ ಸಂದರ್ಶನದಲ್ಲಿ ಪಾಲ್ಗೊಂಡರು. 

ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಫೀಲ್ಡಿಂಗ್‌ ಕೋಚ್‌ ಆಗಿದ್ದ ಜಾಂಟಿ ರೋಡ್ಸ್‌ ಸಂದರ್ಶನಕ್ಕೆ ಹಾಜರಾದರು. ಬಾಂಗ್ಲಾದೇಶದ ಮಾಜಿ ಫೀಲ್ಡಿಂಗ್‌ ಕೋಚ್‌, ಬ್ರಿಟನ್‌ನ ಮಾಜಿ ಬೇಸ್‌ಬಾಲ್‌ ಆಟಗಾರ ಜ್ಯೂಲಿಯನ್‌ ಫೌಂಟೇನ್‌ ಸಹ ಪ್ರಸಾದ್‌ ನೇತೃತ್ವದ ಸಮಿತಿ ಮುಂದೆ ಹಾಜರಾಗಿದ್ದು ಅಚ್ಚರಿಗೆ ಕಾರಣವಾಯಿತು. ಫೀಲ್ಡಿಂಗ್‌ ತಜ್ಞ ಎನಿಸಿಕೊಂಡಿರುವ ಜ್ಯೂಲಿಯನ್‌ ಹಾಗೂ ರೋಡ್ಸ್‌ ನಡುವೆ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಪೈಪೋಟಿ ಏರ್ಪಟ್ಟಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios