ಸುಮಾರು 21 ವರ್ಷಗಳ ಕಾಲ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿರುವ ಅಫ್ರಿದಿ, ಒಟ್ಟು 27 ಟೆಸ್ಟ್, 398 ಏಕದಿನ ಹಾಗೂ 90 ಟಿ20 ಪಂದ್ಯಗಳನ್ನಾಡಿದ್ದಾರೆ.
ಮುಂಬೈ(ಏ.18): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಫೆಬ್ರವರಿಯಲ್ಲಿ ವಿದಾಯ ಹೇಳಿದ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಭಾರತ ತಂಡದ ಆಟಗಾರರ ಹಸ್ತಾಕ್ಷರ ಉಳ್ಳ ವಿರಾಟ್ ಕೊಹ್ಲಿ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಜೆರ್ಸಿಯ ಚಿತ್ರವನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ಸಾಮಾಜಿಕ ತಾಣ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ರವಿಶಾಸ್ತ್ರಿ ತಂಡದ ಕೋಚ್ ಆಗಿದ್ದಾಗಲೇ ತಂಡ ಜೆರ್ಸಿ ಹಸ್ತಾಂತರಿಸಲಾಗಿತ್ತು. ಅದರ ಮೇಲೆ ವಿರಾಟ್ ‘‘ಶಾಹಿದ್ ಭಾಯ್, ಶುಭ ಹಾರೈಕೆಗಳು. ನಿಮ್ಮ ವಿರುದ್ಧ ಆಡಿದ್ದು ಸದಾ ಸಂತೋಷ ನೀಡುತ್ತದೆ’’ ಎಂದು ಬರೆದಿದ್ದಾರೆ.
ಯುವರಾಜ್, ನೆಹ್ರಾ, ರೈನಾ, ರಹಾನೆ, ಆರ್.ಅಶ್ವಿನ್, ಕೋಚ್ ರವಿಶಾಸ್ತ್ರಿ ಸೇರಿ ಹಲವರ ಸಹಿ ಇದೆ.
ಸುಮಾರು 21 ವರ್ಷಗಳ ಕಾಲ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿರುವ ಅಫ್ರಿದಿ, ಒಟ್ಟು 27 ಟೆಸ್ಟ್, 398 ಏಕದಿನ ಹಾಗೂ 90 ಟಿ20 ಪಂದ್ಯಗಳನ್ನಾಡಿದ್ದಾರೆ.