ಬೆಂಗಳೂರು(ಫೆ.16): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. ಬಹುತೇಕ ಇದೇ ತಂಡ 2019ರ ವಿಶ್ವಕಪ್‌ಗೂ ಆಯ್ಕೆಯಾಗೋ ಸಾಧ್ಯತೆ ಹೆಚ್ಚು. ಪ್ರತಿಷ್ಠಿತ ಟೂರ್ನಿಗೆ 18  ಸದಸ್ಯರನ್ನ ಈಗಾಗಲೇ ಆಯ್ಕೆ ಸಮಿತಿ ಅಂತಿಮಗೊಳಿಸಿದೆ ಎಂದು ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್  ಹೇಳಿದ್ದಾರೆ. ಇದರ ಬೆನ್ನಲ್ಲೇ ವಿಶ್ವಕಪ್ 2019ರ ಟೂರ್ನಿಗೆ 15 ಸದಸ್ಯರ ಸಂಭನೀಯ ತಂಡ ಹೊರಬಿದ್ದಿದೆ.

ಇದನ್ನೂ ಓದಿ: ವಿಶ್ವಕಪ್ 2019: ತಂಡದ ಯಶಸ್ಸಿಗೆ ಕಾರಣರಾಗೋ 5 ಆರಂಭಿಕರು!

ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಕೆಲ ಪ್ರಯೋಗ ಮಾಡಿತ್ತು. ಇದೀಗ ಆಸಿಸ್ ವಿರುದ್ಧ ಪ್ರಯೋಗ ಮಾಡಲಿದೆ. ಈ ಮೂಲಕ 2019ರ ವಿಶ್ವಕಪ್ ಟೂರ್ನಿಗೆ ಆಟಗಾರರನ್ನ ಅಂತಿಮಗೊಳಿಸಲಿದೆ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಯಾವು ಪ್ರಮುಖ ಆಟಗಾರರಿಗೂ ವಿಶ್ರಾಂತಿ ನೀಡದೆ ಫುಲ್ ಫ್ಲೆಡ್ಜ್ ಟೀಂ ಕಣಕ್ಕಿಳಿಸಿದೆ.

ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ-ಎಲ್ಲಿ ಸಿಗಲಿದೆ ಟಿಕೆಟ್?

ಸಂಭವನೀಯ ಟೀಂ ಇಂಡಿಯಾ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಾಟಿ ರಾಯುಡು,  ಎಂ.ಎಸ್.ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜುವೇಂದ್ರ ಚೆಹಾಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ವಿಜಯ್ ಶಂಕರ್, ರಿಷಬ್ ಪಂತ್, ಕೆ.ಎಲ್.ರಾಹುಲ್