Asianet Suvarna News Asianet Suvarna News

ಕಣಕ್ಕಿಳಿಯಲಿದ್ದಾರೆ ಸ್ವಿಂಗ್ ವೇಗಿ ಭುವನೇಶ್ವರ್ ಕುಮಾರ್!

ಇಂಗ್ಲೆಂಡ್ ವಿರುದ್ಧದ ನಿಗಧಿತ ಓವರ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಆಗಸ್ಟ್ 29 ರಂದು ಭುವಿ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

Team India player Bhuvneshwar Kumar declared fit to play
Author
Bengaluru, First Published Aug 27, 2018, 8:58 PM IST

ಬೆಂಗಳೂರು(ಆ.27): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಭುವನೇಶ್ವರ್ ಕುಮಾರ್ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಇಷ್ಟೇ ಅಲ್ಲ ಭುವಿ ಮತ್ತೆ ಮೈದಾನಕ್ಕಿಳಿಯಲಿದ್ದಾರೆ.

ಸೌತ್ಆಫ್ರಿಕಾ ಎ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ತಮ್ಮ ಫಿಟ್ನೆಸ್ ಪ್ರೂವ್ ಮಾಡಲಿದ್ದಾರೆ. ಭಾರತ ಎ ಹಾಗೂ ಸೌತ್ಆಫ್ರಿಕಾ ಎ ತಂಡಗಳು ಹೋರಾಟ ನಡೆಸಲಿದೆ.  ಈ ಪಂದ್ಯದಲ್ಲಿ ಭುವಿ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

 

 

ಭಾರತ ಎ ಹಾಗೂ ಸೌತ್ಆಫ್ರಿಕಾ ಎ ನಡುವಿನ ಪಂದ್ಯದಲ್ಲಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಿದರೆ, ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿರುವ ಏಷ್ಯಾ ಕಪ್ ಟೂರ್ನಿ ಆಡೋ ಸಾಧ್ಯತೆ ಹೆಚ್ಚಿದೆ.  
 

Follow Us:
Download App:
  • android
  • ios