ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಆರೋಪದಿಂದ ಬಿಸಿಸಿಐ ಆಜೀವ ನಿಷೇಧಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಇದೀಗ ಕ್ರಿಕೆಟ್‌ಗೆ ಮರಳಿದ್ದಾರೆ. 5 ವರ್ಷಗಳ ಬಳಿಕ ಶ್ರೀಶಾಂತ್ ಮೈದಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಶ್ರೀಶಾಂತ್ ಕಮ್‌ಬ್ಯಾಕ್ ಸ್ಟೋರಿ ಇಲ್ಲಿದೆ.

ತಿರುವನಂತಪುರ(ಆ.10): ಬಿಸಿಸಿಐ ನಿಷೇಧಿತ ಕ್ರಿಕೆಟಿಗ ಎಸ್ ಶ್ರೀಶಾಂತ್ ಬರೋಬ್ಬರಿ 5 ವರ್ಷಗಳ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿರುವ ವೇಗಿ ಎಸ್ ಶ್ರೀಶಾಂತ್ ಇದೀಗ ಮತ್ತೆ ಬೌಲಿಂಗ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.

2013ರ ಐಪಿಎಲ್ ಸ್ಫಾಟ್ ಪಿಕ್ಸಿಂಗ್‌ನಿಂದ ನಿಷೇಧಕ್ಕೊಳಗಾದ ಶ್ರೀಶಾಂತ್ ತಮ್ಮ ಮೇಲಿನ ಆರೋಪಗಳಿಂದ ಮುಕ್ತವಾಗಿದ್ದಾರೆ. ಆದರೆ ಬಿಸಿಸಿಐ ಇನ್ನು ಶ್ರೀಶಾಂತ್ ಮೇಲಿನ ನಿಷೇಧ ತೆರವುಗೊಳಿಸಿಲ್ಲ. ಬಿಸಿಸಿಐ ವಿರುದ್ಧ ಕಾನೂನು ಹೋರಾಟ ಮುಂದುವರಿಸಿರುವ ಶ್ರೀಶಾಂತ್ ಇದೀಗ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಶ್ರೀಶಾಂತ್ ಬೌಲಿಂಗ್ ಮಾಡುತ್ತಿರುವ ವೀಡಿಯೋವನ್ನ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಶಾಂತ್ ಬೌಲಿಂಗ್ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಆದರೆ ಶ್ರೀಶಾಂತ್ ಪಂದ್ಯ ಹಾಗೂ ಸ್ಥಳದ ಕುರಿತು ಹೆಚ್ಚಿನ ವಿವರ ಬಹಿರಂಗ ಪಡಿಸಿಲ್ಲ.

View post on Instagram

35 ವರ್ಷದ ಶ್ರೀಶಾಂತ್ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡೋದು ಕಷ್ಟ. ಆದರೆ ಫ್ರಾಂಚೈಸಿ ಕ್ರಿಕೆಟ್‌ಗೆ ಮರಳೋ ಸಾಧ್ಯತೆ ಇದೆ. ಆದರೆ ಬಿಸಿಸಿಐ ಅನುಮತಿ ಬೇಕಿದೆ.