ಚೆಲ್ಮ್ಸ್‌ಫೋರ್ಡ್(ಜು.25): ಎಸೆಕ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಲು ಸಾಧ್ಯವಾಗಲಿಲ್ಲ.

ಮ್ಯಾಟ್ ಕೊಲೆಸ್ ಎಸೆತದಲ್ಲಿ ಧವನ್ ಡಕೌಟ್ ಆದರು. ಹೀಗಾಗಿ 1 ರನ್‌ಗೆ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಟೀಂ ಇಂಡಿಯಾದ ಆಧಾರ ಸ್ಥಂಭ ಚೇತೇಶ್ವರ್ ಪೂಜರ ಕೇವಲ 1 ರನ್ ಸಿಡಿಸಿ ಔಟಾದರು. ಆರಂಭಿಕ ಹಂತದಲ್ಲಿ ಭಾರತ ಪ್ರಮುಖ 2 ವಿಕೆಟ್ ಕಳೆದುಕೊಂಡಿದೆ.

 

 

ಎಸೆಕ್ಸ್ ವಿರುದ್ಧದ ನಾಲ್ಕು ದಿನದ ಅಭ್ಯಾಸ ಪಂದ್ಯವನ್ನ 3 ದಿನಕ್ಕೆ ಸೀಮಿತಗೊಳಿಸಲಾಗಿದೆ. ಕಳಪೆ ಪಿಚ್ ಹಾಗೂ ಔಟ್‌ಫೀಲ್ಡ್‌ಗೆ ಭಾರತ ಅಸಮಧಾನ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ಪಂದ್ಯವನ್ನ 3 ದಿನಕ್ಕೆ ಸೀಮಿತಗೊಳಿಸಲು ಸೂಚಿಸಿತ್ತು. 

ಇದನ್ನು ಓದಿ: ವಿರಾಟ್ ಕೊಹ್ಲಿಯ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕೊಡಬೇಕು 82 ಲಕ್ಷ ರೂಪಾಯಿ!

ಇದನ್ನು ಓದಿ: ಎರಡೂ ಕೈಗಳಲ್ಲಿ ಬೌಲಿಂಗ್-ಅಚ್ಚರಿ ಮೂಡಿಸಿದ ಮೋಕಿತ್ ಹರಿಹರನ್