ಬೆಂಗಳೂರು(ಜು.25): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವಕ್ರಿಕೆಟ್‌ನ ಜನಪ್ರೀಯ ಕ್ರಿಕೆಟಿಗ. ಅದ್ಬುತ ಬ್ಯಾಟಿಂಗ್ ಹಾಗೂ ಅಗ್ರೆಸ್ಸೀವ್ ನಾಯಕತ್ವದಿಂದ ಹಲವು ದಾಖಲೆ ಬರೆದಿರುವ ಕೊಹ್ಲಿ ಮೂರು ಮಾದರಿಯಲ್ಲೂ ಯಶಸ್ಸು ಕಂಡಿದ್ದಾರೆ.

ಪ್ರತಿ ಪಂದ್ಯದಲ್ಲೂ ಅಬ್ಬರಿಸುತ್ತಿರುವ ವಿರಾಟ್ ಕೊಹ್ಲಿ ಜಾಹೀರಾತು, ಎಂಡೋರ್ಸ್‌ಮೆಂಟ್‌ಗಳಿಂದ ನೂರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಹಲವು ಕ್ಷೇತ್ರದಲ್ಲಿ ಬಂಡವಾಳ ಹೂಡಿರುವ ಕೊಹ್ಲಿ, ಇನ್‌ಕಮ್  ಎಣಿಸುತ್ತಿದ್ದಾರೆ.  ಕೊಹ್ಲಿ ಆದಾಯ ಇಲ್ಲಿಗೆ ಮುಗಿಯಲ್ಲ. ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಮೂಲಕವೂ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ 25.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ 23.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಕೊಹ್ಲಿ ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆಗಿನ ಫೋಟೋಗಳನ್ನ ಪೋಸ್ಟ್ ಮಾಡಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

ಕೊಹ್ಲಿ ಖಾಸಗಿ ಪೋಸ್ಟ್‌ಗಳ ಜೊತೆಗೆ ಇತರ ಪ್ರಾಯೋಜಕತ್ವದ ಜಾಹೀರಾತನ್ನು ನೀಡುತ್ತಾರೆ. ಕೊಹ್ಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಾಹೀರಾತು ಅಥವಾ ಬ್ರ್ಯಾಂಡ್ ಪ್ರಮೋಶನ್‌ಗೆ ಕಂಪೆನಿಗಳು ಪ್ರತಿ ಪೋಸ್ಟ್‌ಗೆ ಬರೋಬ್ಬರಿ 82 ಲಕ್ಷ ರೂಪಾಯಿ ನೀಡಬೇಕು.  

ಇನ್‌ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್‌ಗೆ ಗರಿಷ್ಠ ಆದಾಯ ಪಡೆಯುತ್ತಿರುವ ಲಿಸ್ಟ್‌ನಲ್ಲಿ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನವನ್ನ ಪೋರ್ಚುಗಲ್ ಸ್ಟಾರ್ ಫುಟ್ಬಾಲರ್ ಅಲಂಕರಿಸಿದ್ದಾರೆ.  ರೋನಾಲ್ಡೋ ಇನ್‌ಸ್ಟಾಗ್ರಾಂ ಖಾತೆಯ ಪ್ರತಿ ಪೋಸ್ಟ್‌ಗೆ ಬರೋಬ್ಬರಿ 5.16 ಕೋಟಿ ಪಾವತಿಸಬೇಕು.

ಇನ್‌ಸ್ಟಾಗ್ರಾಂ ಪ್ರತಿ ಪೋಸ್ಟ್ ಆದಾಯ

ಕ್ರಿಸ್ಟಿಯಾನೋ ರೋನಾಲ್ಡೋ 5.16 ಕೋಟಿ
ನೇಯ್ಮಾರ್     4.12 ಕೋಟಿ
ವಿರಾಟ್ ಕೊಹ್ಲಿ 82.43 ಲಕ್ಷ
ಫ್ಲಾಯ್ಡ್ ಮೇವೆದರ್ 73.51ಲಕ್ಷ