ಎರಡೂ ಕೈಗಳಲ್ಲಿ ಬೌಲಿಂಗ್-ಅಚ್ಚರಿ ಮೂಡಿಸಿದ ಮೋಕಿತ್ ಹರಿಹರನ್

First Published 25, Jul 2018, 3:15 PM IST
Mokit Hariharan Surprises Many With Ambidextrous Bowling Action in TNPL
Highlights

ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಮಾಡಿ ರೈಟ್ ಹ್ಯಾಂಡ್ ಬೌಲಿಂಗ್ ಮಾಡಿರೋದು ನೋಡಿದ್ದೇವೆ. ಆದರೆ ಎಡಗೈ ಹಾಗೂ ಬಲಗೈ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡೋದು ಅಪರೂಪ. ಇದೀಗ ಟಿಎನ್‌ಪಿಎಲ್ ಟೂರ್ನಿಯಲ್ಲಿ ಮೋಕಿತ್ ಕುಮಾರ್ ಈ ಸಾಧನೆ ಮಾಡಿದ್ದಾರೆ.
 

ತಮಿಳುನಾಡು(ಜು.25): ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ವಿಬಿ ಕಂಚಿ ವೀರನ್ಸ್ ತಂಡದ ಆಲ್‌ರೌಂಡರ್ ಮೋಕಿತ್ ಹರಿಹರನ್ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡೋ ಮೂಲಕ ಅಚ್ಚರಿ ಮೂಡಿಸಿದ್ದಾರೆ

ದಿಂಡುಗಲ್ ಡ್ರಾಗನ್ಸ್ ವಿರುದ್ಧದ ಪಂದ್ಯದಲ್ಲಿ ಮೋಕಿತ್ , ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಎಡಗೈಯಲ್ಲಿ ಹಾಗೂ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈಯಲ್ಲಿ ಬೌಲಿಂಗ್ ಮಾಡಿದ್ದಾರೆ. 18 ವರ್ಷದ ಈ ಯುವ ಕ್ರಿಕೆಟಿಗ 4 ಓವರ್ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಲು ವಿಫಲರಾದರು. ಆದರೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

 

 

ಆಲ್‌ರೌಂಡರ್ ಆಗಿರೋ ಹರಿಹರನ್ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ದಿಂಡುಗಲ್ ವಿರುದ್ಧದ  ಆರಂಭಿಕ ಪಂದ್ಯದಲ್ಲಿ 50 ಎಸೆತದಲ್ಲಿ 5 ಬೌಂಡರಿ ಹಾಗೂ  5 ಸಿಕ್ಸರ್ ನೆರವಿನಿಂದ 75 ರನ್ ಸಿಡಿಸಿದ್ದರು. ಇದೀಗ ಲೆಫ್ ಹಾಗೂ ರೈಟ್ ಬೌಲಿಂಗ್ ಮಾಡಿ ಭಾರಿ ಸುದ್ದಿಯಾಗಿದ್ದಾರೆ.

ಮೋಕಿತ್ ಕುಮಾರ್‌ಗೂ ಮೊದಲು ವಿದರ್ಭ ತಂಡದ ಅಕ್ಷಯ್ ಕಾರ್ನೆವಾರ್ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡಿ ಮಿಂಚಿದ್ದರು. 2015-16ರ ಸಾಲಿನ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಆಕ್ಷಯ್ ಎಡಗೈ ಹಾಗೂ ಬಲಗೈಯಲ್ಲಿ ಬೌಲಿಂಗ್ ದಾಳಿ ನಡೆಸಿದ್ದರು.

loader