ನವದೆಹಲಿ(ಆ.01): ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ರ ಜೀವನಾಧಾರಿತ ಸಿನಿಮಾದಲ್ಲಿ ‘ಕ್ರಿಕೆಟ್‌ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ತಂಡ ಈ ವಿಷಯವನ್ನು ಖಚಿತಪಡಿಸಿದೆ.

ಸೆಟ್ಟೇರಲಿದೆ ಮುತ್ತಯ್ಯ ಮುರುಳೀಧರನ್ ಬಯೋಪಿಕ್

ಈ ವರ್ಷ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದ್ದು, ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ. ಮುರಳಿಧರನ್‌ ಹಾಗೂ ಸಚಿನ್‌ ಹಲವು ರೋಚಕ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಒಬ್ಬರ ವಿರುದ್ಧ ಮತ್ತೊಬ್ಬರು ಪ್ರಮುಖ ದಾಖಲೆಗಳನ್ನು ಹೊಂದಿದ್ದಾರೆ. ಹೀಗಾಗಿ ಮುರಳಿ ಜೀವನ ಕುರಿತ ಚಿತ್ರದಲ್ಲಿ ಸಚಿನ್‌ ಕಾಣಿಸಿಕೊಳ್ಳುವುದು ಬಹು ಮುಖ್ಯ ಎಂದು ಚಿತ್ರ ತಂಡ ತಿಳಿಸಿದೆ. ಸಚಿನ್ ತೆಂಡುಲ್ಕರ್ ಮಾತ್ರವಲ್ಲದೇ ರಣತುಂಗಾ, ಜಯಸೂರ್ಯ, ಮಾಲಿಂಗ, ರಿಕಿ ಪಾಂಟಿಂಗ್‌ ಸೇರಿದಂತೆ ಇನ್ನೂ ಕೆಲ ಕ್ರಿಕೆಟಿಗರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮುತ್ತಯ್ಯ 800 ವಿಕೆಟ್: ನೆನಪಿದೆಯಾ ಆ ಕೊನೆಯ ಓವರ್..?

ಬಾಹುಬಲಿ ಚಿತ್ರದಲ್ಲಿ ಖಳನಟನಾಗಿ ಮಿಂಚಿದ್ದ ರಾಣಾ ದಗ್ಗುಬಾಟಿ ಸಹನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರವು 2020ರ ವೇಳೆಗೆ ತೆರೆಗೆ ಅಪ್ಪಳಿಸಲಿದೆ ಎನ್ನಲಾಗಿದೆ. ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ.