ಸರಣಿಗೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋ ಶೂಟ್

Team India Face the Lenses Before Taking Guard Against Ireland and England
Highlights

ಭಾರತ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನ ಕೊಹ್ಲಿ ಬಾಯ್ಸ್ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡಿದ್ದಾರೆ. ಎಂ ಎಸ್ ಧೋನಿ, ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರ ಕ್ಯಾಮರ ಫೋಸ್‌ ಹೇಗಿದೆ? ಇಲ್ಲಿದೆ ವಿವರ.

ಡಬ್ಲಿನ್(ಜೂ.26): ಐರ್ಲೆಂಡ್ ವಿರುದ್ಧದ 2 ಟಿ-ಟ್ವೆಂಟಿ ಸರಣಿಗಾಗಿ  ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ. ಡಬ್ಲಿನ್‌ನಲ್ಲಿ ಜೂನ್ 27ಹಾಗೂ 29 ರಂದು ಭಾರತ ಎರಡು ಎರಡು ಟಿ-ಟ್ವೆಂಟಿ ಪಂದ್ಯ ಆಡಲಿದೆ. ಸರಣಿಗೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರ ಫೋಟೋ ಶೂಟ್ ನಡೆಯಿತು.

 

 

ಟೀಂ ಇಂಡಿಯಾ ಜರ್ಸಿ ಧರಿಸಿ ಭಾರತೀಯ ಕ್ರಿಕೆಟಿಗರು ಕ್ಯಾಮರಾಗೆ ಫೋಸ್ ನೀಡಿದರು. ಎಂ ಎಸ್ ಧೋನಿ, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಉಮೇಶ್ ಯಾದವ್ ಸೇರಿದಂತೆ ಬ್ಲೂ ಬಾಯ್ಸ್ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡರು.

ಫೋಟೋ ಶೂಟ್ ಬಳಿಕ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿತು. ಐರ್ಲೆಂಡ್ ವಿರುದ್ಧದ ಸರಣಿ ಬಳಿಕ ಭಾರತ, ಆಂಗ್ಲರ ವಿರುದ್ಧ ಮಹತ್ವದ ಸರಣಿ ಆಡಲಿದೆ. ಇಂಗ್ಲೆಂಡ್ ವಿರುದ್ಧ 3 ಟಿ20, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯ ಆಡಲಿರುವ ಭಾರತ, ಗೆಲುವಿನ ವಿಶ್ವಾಸದಲ್ಲಿದೆ.

 ಇದನ್ನು ಓದಿ: ವಿಮಾನ ಪ್ರಯಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತಿ ಹೇಗಿತ್ತು? ವಿಡಿಯೋ ಇಲ್ಲಿದೆ

2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಹಿನ್ನಡೆ ಅನುಭವಿಸಿದ್ದರು. 10 ಇನ್ನಿಂಗ್ಸ್‌ಗಳಲ್ಲಿ 134 ರನ್ ಸಿಡಿಸಿದ್ದರು. ಯುವ ಭಾರತ ತಂಡ ಹೊಸ ದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದೆ.
 ಇದನ್ನು ಓದಿ: ಟಿ20 ಪಂದ್ಯಕ್ಕಾಗಿ ಐರ್ಲೆಂಡ್‌ನಲ್ಲಿ ಕೊಹ್ಲಿ ಬಾಯ್ಸ್ ನೆಟ್ ಪ್ರಾಕ್ಟೀಸ್! ವಿಡಿಯೋ ಇಲ್ಲಿದೆ

loader