ವಿಮಾನ ಪ್ರಯಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತಿ ಹೇಗಿತ್ತು?

In-flight entertainment: Hardik's verbal volleys for Virat & boys
Highlights

ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಸರಣಯಲ್ಲಿ ಸಿಕ್ಕ ಸಮಯದಲ್ಲಿ ತುಂಬಾ ಮಸ್ತಿ ಮಾಡುತ್ತಾರೆ. ಇದೀಗ ಇಂಗ್ಲೆಂಡ್‌ನಿಂದ ಐರ್ಲೆಂಡ್ ನಡುವಿನ ವಿಮಾನ ಪ್ರಯಾಣದಲ್ಲಿ ಕೊಹ್ಲಿ ಬಾಯ್ಸ್ ಮಸ್ತಿ ಹೇಗಿತ್ತು? ಇಲ್ಲಿದೆ ವೀಡಿಯೋ.
 

ಐರ್ಲೆಂಡ್(ಜೂ.26): ಐರ್ಲೆಂಡ್ ವಿರುದ್ದದ 2 ಟಿ-ಟ್ವೆಂಟಿ ಪಂದ್ಯಕ್ಕಾಗಿ ಟೀಂ ಇಂಡಿಯಾ ಕ್ರಿಕೆಟಿಗರು ಡಬ್ಲಿನ್‌ಗೆ ಬಂದಿಳಿದಿದ್ದಾರೆ. ಇಂಗ್ಲೆಂಡ್ ನಿಂದ ಐರ್ಲೆಂಡ್ ನಡುವಿನ ವಿಮಾನ ಪ್ರಯಾಣದಲ್ಲಿ ಕೊಹ್ಲಿ ಬಾಯ್ಸ್ ಸಖತ್ ಮಸ್ತಿ ಮಾಡಿದ್ದಾರೆ. 

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಶ್ನೆಗೆ ಸಹ ಆಟಗಾರರು ಉತ್ತರಿಸಿದರು. ನಾಯಕ ವಿರಾಟ್ ಕೊಹ್ಲಿ ಸರಣಿ ನೆನಪುಗಳನ್ನ ಬಿಚ್ಚಿಟ್ಟರೆ, ಮನೀಶ್ ಪಾಂಡೆ ತಮ್ಮ ಹೊಸ ಹೇರ್‌ಸ್ಟೈಲ್‌ಗೆ ಸ್ಪೂರ್ತಿ ಯಾರು ಅನ್ನೋದನ್ನ ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಹಾಗೂ ಕೆಎಲ್ ರಾಹುಲ್, ಪ್ರಶ್ನೆ ಕೇಳುತ್ತಿದ್ದ ಹಾರ್ದಿಕ್ ಪಾಂಡ್ಯಾಗೆ ಮರು ಪ್ರಶ್ನೆ ಹಾಕಿ ತಬ್ಬಿಬ್ಬು ಮಾಡಿದರು. ಇಡೀ ಪ್ರಯಾಣದಲ್ಲಿ ಭಾರತೀಯ ಕ್ರಿಕೆಟಿಗರು ಎಂಜಾಯ್ ಮಾಡಿದ್ದಾರೆ. ಜೂನ್ 27 ಹಾಗೂ 29 ರಂದು ಐರ್ಲೆಂಡ್ ವಿರುದ್ಧ ಭಾರತ 2 ಟಿ-ಟ್ವೆಂಟಿ ಪಂದ್ಯ ಆಡಲಿದೆ.

ಟೀಂ ಇಂಡಿಯಾ ಕ್ರಿಕೆಟಿಗರ ವಿಮಾನ ಪ್ರಯಾಣದ ಮಸ್ತಿ ವಿಡೀಯೋಗಾಗಿ ಇಲ್ಲಿ ಕ್ಲಿಕ್ ಮಾಡಿ:
 

loader