ಟಿ-ಟ್ವೆಂಟಿ ಸರಣಿಗಾಗಿ ಐರ್ಲೆಂಡ್ ತಲುಪಿರುವ ಭಾರತ ತಂಡ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ ಕ್ರಿಕೆಟಿಗರ ನೆಟ್ ಪ್ರಾಕ್ಟೀಸ್ ಹೇಗಿದೆ. ಯಾವೆಲ್ಲಾ ಆಟಾಗಾರರು ಮೈದಾನದಲ್ಲಿ ಕಸರತ್ತು ನಡೆಸಿದರು. ಇಲ್ಲಿದೆ ವೀಡಿಯೋ 

ಐರ್ಲೆಂಡ್(ಜೂ.26): ಐರ್ಲೆಂಡ್ ವಿರುದ್ಧದ 2 ಟಿ-ಟ್ವೆಂಟಿ ಪಂದ್ಯದ ಸರಣಿಗಾಗಿ ಡಬ್ಲಿನ್‌ನಲ್ಲಿ ಬೀಡುಬಿಟ್ಟಿರುವ ಭಾರತ ತಂಡ ಭರ್ಜರಿ ಅಭ್ಯಾಸ ಆರಂಭಿಸಿದೆ. ಮೊದಲ ದಿನ ಜಿಮ್‌ನಲ್ಲಿ ಅಭ್ಯಾಸ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರು ಇದೀಗ ನೆಟ್ ಪ್ರಾಕ್ಟೀಸ್ ಮಾಡೋ ಮೂಲಕ ತಯಾರಿ ಆರಂಭಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನು ಓದಿ:ವಿಮಾನ ಪ್ರಯಾಣದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರ ಮಸ್ತಿ ಹೇಗಿತ್ತು?

ಎಮ್ ಎಸ್ ಧೋನಿ, ನಾಯಕ ವಿರಾಟ್ ಕೊಹ್ಲಿ, ಸುರೇಶ್ ರೈನಾ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಜೂನ 27 ಹಾಗೂ 29 ರಂದು ಭಾರತ, ಐರ್ಲೆಂಡ್ ವಿರುದ್ಧ 2 ಟಿ-ಟ್ವೆಂಟಿ ಪಂದ್ಯ ಆಡಲಿದೆ.

ಇದನ್ನು ಓದಿ: ಐರ್ಲೆಂಡ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಜಿಮ್‌ನಲ್ಲಿ ಕಸರತ್ತು

ಐರ್ಲೆಂಡ್ ಸರಣಿ ಬಳಿಕ ಇಂಗ್ಲೆಂಡ್‌ಗೆ ತೆರಳಲಿರುವ ಟೀಂ ಇಂಡಿಯಾ ಜುಲೈ 3 ರಿಂದ 3 ಟಿ-ಟ್ವೆಂಟಿ, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳ ಸರಣಿ ಆಡಲಿದೆ.