ಟೀಂ ಇಂಡಿಯಾ 4 ಡಿಆರ್'ಎಸ್'ಗಳ ಪೈಕಿ ಕೇವಲ್ ಒಂದು ಮಾತ್ರ ಸಫಲವಾದರೆ, ಮೂರೂ ಮೇಲ್ಮನವಿಗಳು ವಿಫಲವಾದವು.

ಬೆಂಗಳೂರು(ಮಾ.02): ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಸಾರ್ಮರ್ಥ್ಯಕ್ಕೆ ತಕ್ಕಂತೆ ಆಟವಾಡಲಿಲ್ಲ ಎಂದು ಮುಖ್ಯಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಪಡೆ ಪುಣೆಯಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ಇರುವುದೇ ಸೋಲಿಗೆ ಮುಖ್ಯ ಕಾರಣ ಎಂದು ಕುಂಬ್ಳೆ ಹೇಳಿದ್ದಾರೆ.

ಕೇವಲ ಮೂರೇ ದಿನಗಳಲ್ಲಿ ಮುಕ್ತಾಯವಾದ ಪಂದ್ಯದಲ್ಲಿ ಆಸೀಸ್ ಸ್ಪಿನ್ನರ್ ಸ್ಟೀವ್ ಓ'ಕೆಫೆ 12 ವಿಕೆಟ್ ಪಡೆದು ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದರು.ಎರಡೂ ಪಂದ್ಯಗಳಲ್ಲಿ ಕೇವಲ 18 ಮತ್ತು 13 ರನ್ ಬಾರಿಸಿದ ಅಜಿಂಕ್ಯಾ ರಹಾನೆ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರ ಎಂಬ ಪ್ರಶ್ನೆಗೆ ಉತ್ತರಿಸಿದ ಕುಂಬ್ಳೆ, ರಹಾನೆ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಸಾಕಷ್ಟು ಬಾರಿ ರಹಾನೆ ಅತ್ಯುತ್ತಮ ಇನಿಂಗ್ಸ್ ಕಟ್ಟಿದ್ದಾರೆ ಎಂದಿದ್ದಾ

ಮಾರ್ಚ್ 4ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್'ಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕುಂಬ್ಳೆ "ಪುಣೆ ಟೆಸ್ಟ್ ಮುಗಿದಿದೆ. ನಮ್ಮ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಲು ಸಾಧ್ಯವಾಗಿಲ್ಲ. ಪ್ರತಿ ಪಂದ್ಯದಲ್ಲೂ ಏನು ಫಲಿತಾಂಶ ಬರುತ್ತದೋ ಅದನ್ನು ಒಪ್ಪಿಕೊಳ್ಳಬೇಕು. ಆಸ್ಟ್ರೇಲಿಯಾ ನಮ್ಮೆದುರು ಚೆನ್ನಾಗಿ ಆಟವಾಡಿತು" ಎಂದು ಹೇಳಿದ್ದಾರೆ.

ನಮ್ಮ ಗುರಿಯೇನಿದ್ದರೂ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗೆಲುವಿನ ಹಳಿಗೆ ಮರಳುವುದಾಗಿದೆ. ತಂಡದ ಸೋಲಿಗೆ ಯಾರ ಮೇಲೂ ಬೆಟ್ಟು ಮಾಡಿ ತೋರಿಸುವುದು ಸರಿಯಲ್ಲ. ನಾವು ತುಂಬಾ ಮೊದಲೇ ಡಿಆರ್'ಎಸ್ ತೆಗೆದುಕೊಂಡಿದ್ದೂ ಫಲಿತಾಂಶದ ಮೇಲೆ ಪರಿಣಾಮ ಬೀರಿತು ಎಂದು ಮಾಜಿ ಲೆಗ್ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ 4 ಡಿಆರ್'ಎಸ್'ಗಳ ಪೈಕಿ ಕೇವಲ್ ಒಂದು ಮಾತ್ರ ಸಫಲವಾದರೆ, ಮೂರೂ ಮೇಲ್ಮನವಿಗಳು ವಿಫಲವಾದವು.