ರಾಂಚಿ(ಮಾ.07): ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ತಯಾರಿ ನಡೆಸುತ್ತಿದೆ. ರಾಂಚಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತ ತೃತೀಯ ಪಂದ್ಯ ಗೆದ್ದು ಸರಣಿ ಕೈವಶ ಮಾಡಲು ತುದಿಗಾಲಲ್ಲಿ ನಿಂತಿದೆ. ಇದರ ನಡುವೆ ಸಿಕ್ಸರ್ ಚಾಲೆಂಜ್ ಆಡೋ ಮೂಲಕ ಗಮನಸೆಳೆದಿದೆ.

ಇದನ್ನೂ ಓದಿ: ಧೋನಿ ಮನೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಡಿನ್ನರ್!

ಮಾ.08 ರಂದು ತೃತೀಯ ಏಕದಿನ ಪಂದ್ಯ ನಡೆಯಲಿದೆ. ಎಂ.ಎಸ್.ಧೋನಿ ತವರಿನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಟೀಂ ಇಂಡಿಯಾ, ಸಿಕ್ಸರ್ ಚಾಲೆಂಜ್ ಹಮ್ಮಿಕೊಂಡಿತ್ತು. ಯಾರು ಲಾಂಗೆಸ್ಟ್ ಸಿಕ್ಸರ್ ಸಿಡಿಸುತ್ತಾರೆ ಅನ್ನೋ ಸ್ಪರ್ಧೆ ಏರ್ಪಡಿಸಲಾಗಿತ್ತು.  ನೆಟ್ಸ್‌ನಲ್ಲಿ ಕ್ರಿಕೆಟಿಗರು ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ.

 

 

ಇದನ್ನೂ ಓದಿ: ಧೋನಿ ಪೆವಿಲಿಯನ್ ಉದ್ಘಾಟಿಸಲು ನಿರಾಕರಿಸಿದ MSD!

ಎಂ.ಎಸ್.ಧೋನಿ, ರವೀಂದ್ರ ಜಡೇಜಾ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಚಾಲೆಂಜ್ ಸ್ವೀಕರಿಸಿ ಸಿಕ್ಸರ್ ಬಾರಿಸಿದರು.  ಕ್ರಿಕೆಟಿಗರ ಸಿಕ್ಸರ್ ಚಾಲೆಂಜ್ ಪ್ರಾಕ್ಟೀಸ್ ನೋಡಲು ಬಂದಿದ್ದ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು.