#FitIndia ಆಂದೋಲನ; ಮೋದಿ ಜೊತೆ ಕೈಜೋಡಿಸಿದ ಕ್ರಿಕೆಟರ್ಸ್, ಅಥ್ಲೆಟ್ಸ್!
ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿರುವ ಫಿಟ್ ಇಂಡಿಯಾ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಚ್ಚ ಭಾರತ ಸೇರಿದಂತೆ ಹಲವು ಆಂದೋಲನಗಳನ್ನು ಜಾರಿಗೊಳಿಸಿರುವ ಮೋದಿ ಇದೀಗ ಆರೋಗ್ಯವಂತ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರುಸ, ಕ್ರೀಡಾಪಟುಗಳು ಕೈಜೋಡಿಸಿದ್ದಾರೆ.
ನವದೆಹಲಿ(ಆ.29): ಪ್ರಧಾನಿ ನರೇಂದ್ರ ಮೋದಿ ಹೊಸ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಆರೋಗ್ಯವಂತ ಭಾರತಕ್ಕಾಗಿ ಫಿಟ್ ಇಂಡಿಯಾ ಆಂದೋಲನವನ್ನು ಬೆಂಬಲಿಸುವಂತೆ ಮೋದಿ, ಕ್ರೀಡಾ ಮಂತ್ರಿ ಕಿರಣ್ ರಿಜಿಜು ಸೇರಿದಂತೆ ಪ್ರಮುಖರು ಮನವಿ ಮಾಡಿದ್ದರು. ಶಾಲಾ ವಿದ್ಯಾರ್ಥಿಗಳು ಮಾತ್ರವಲ್ಲ ಎಲ್ಲರಿಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವ ಫಿಟ್ ಇಂಡಿಯಾಗೆ ಇದೀಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಹಾಗೂ ಕ್ರೀಡಾಪಟುಗಳು ಮೋದಿ ಫಿಟ್ ಇಂಡಿಯಾ ಅಂದೋಲನಕ್ಕೆ ಕೈಜೋಡಿಸಿದ್ದಾರೆ.
ಇದನ್ನೂ ಓದಿ: #FitIndia ಆಂದೋಲನಕ್ಕೆ ಮೋದಿ ಗ್ರೀನ್ ಸಿಗ್ನಲ್!