Asianet Suvarna News Asianet Suvarna News

#BIGBREAKING ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಯುವಿ ಗುಡ್‌ಬೈ...!

ಟೀಂ ಇಂಡಿಯಾ ವಿಶ್ವಕಪ್ ಹೀರೋ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ 17 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.

Team India Cricketer Yuvraj Singh  announces retirement from international cricket
Author
Mumbai, First Published Jun 10, 2019, 1:51 PM IST

ನವದೆಹಲಿ[ಜೂ.10]: ಟೀಂ ಇಂಡಿಯಾ ಯಶಸ್ವಿ ಆಲ್ರೌಂಡರ್, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. 

ಮುಂಬೈನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಯುವಿ, ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ವಿಡಿಯೋ ಮೂಲಕ ಕ್ರಿಕೆಟ್ ನೆನಪುಗಳನ್ನು ಯುವಿ ಬಿಚ್ಚಿಟ್ಟಿದ್ದಾರೆ. 2000 ನೇ ಇಸವಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಯುವಿ, ಟೀಂ ಇಂಡಿಯಾಗೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರವಹಿಸಿದ್ದರು. 

ಕ್ರಿಕೆಟ್ ನನಗೆ ಎಲ್ಲವನ್ನು ನೀಡಿದೆ. ಹೋರಾಡುವುದನ್ನು ಕಲಿಸಿದೆ. 6 ಸಿಕ್ಸರ್ ಸಿಡಿಸಿದ್ದು, ಏಕದಿನ ವಿಶ್ವಕಪ್ ಜಯಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದು ನನ್ನ ವೃತ್ತಿಜೀವನದ ಮರೆಯಲಾರದ ಕ್ಷಣ ಎಂದು ಹೇಳಿದ್ದಾರೆ. ತಂದೆ-ತಾಯಿ, ಸ್ನೇಹಿತರಿಗೆ ಧನ್ಯವಾದ ಹೇಳಿದ್ದಾರೆ. 

ಭಾರತ ಪರ 40 ಟೆಸ್ಟ್, 304 ಏಕದಿನ ಹಾಗೂ 58 ಟಿ20 ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ ಕ್ರಮವಾಗಿ 1900, 8,701 ಹಾಗೂ 1,177 ರನ್ ಬಾರಿಸಿದ್ದಾರೆ. 

ಕ್ಯಾನ್ಸರ್ ಜಯಿಸಿ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿದ್ದ ಯುವಿ 2012ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದು. ಇನ್ನು 2014ರಲ್ಲಿ ಪದ್ಮಶ್ರೀ ಪ್ರಶಸ್ತಿ ಯುವಿಯನ್ನು ಅರಿಸಿ ಬಂದಿತ್ತು
 

Follow Us:
Download App:
  • android
  • ios