ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹಿರಿಯ ಬಿಸಿಸಿಐ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಸಂಪೂರ್ಣ ಟೂರ್ನಿಯುದ್ದಕ್ಕೂ ಯಾವುದೇ ಮಾಹಿತಿ ನೀಡಿದೆ  ಪತ್ನಿ ಜೊತೆ ತಂಗಿದ್ದಾರೆ. ಕ್ರಿಕೆಟಿಗನ ನಡೆ ಬಿಗ್‌ಬಾಸ್ ಕೆಂಗಣ್ಣಿಗೆ ಗುರಿಯಾಗಿದೆ.  

ಮುಂಬೈ(ಜು.22): ವಿಶ್ವಕಪ್ ಟೂರ್ನಿ ಮುಗಿಸಿ ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಆದರೆ ವಿಶ್ವಕಪ್ ಟೂರ್ನಿ ವೇಳೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ನಿಯಮ ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಟೂರ್ನಿ ವೇಳೆ ಪತ್ನಿಯರ ಜೊತೆಗೆ ತಂಗುವ ನಿಯಮದಲ್ಲಿ ಬಿಸಿಸಿಐ ತಿದ್ದುಪಡಿ ಮಾಡಿದೆ. ಆದರೆ ನೂತನ ನಿಯಮ ಉಲ್ಲಂಘಿಸಿದ ಕ್ರಿಕೆಟಿಗ ಇದೀಗ ಬಿಗ್‌ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

"

ಇದನ್ನೂ ಓದಿ: ರಾಯುಡು 3D ಟ್ವೀಟ್‌ಗೆ ಮೊದಲ ಪ್ರತಿಕ್ರಿಯೆ ನೀಡಿದ ಆಯ್ಕೆ ಸಮಿತಿ!

ಬಿಸಿಸಿಐ ನಿಮಯದ ಪ್ರಕಾರ ಟೀಂ ಇಂಡಿಯಾ ಕ್ರಿಕೆಟಿಗರ ಪತ್ನಿಯರು ತಂಡದ ಜೊತೆ 15 ದಿನಗಳ ಮಾತ್ರ ಇರಲು ಅವಕಾಶವಿದೆ. ಆದರೆ ಹಿರಿಯ ಕ್ರಿಕೆಟಿಗನ ಪತ್ನಿ ಇಡೀ ವಿಶ್ವಕಪ್ ಟೂರ್ನಿಯಲ್ಲಿ(7 ವಾರ) ಜೊತೆಗಿದ್ದರು. ಪತ್ನಿ ಇರುವಿಕೆಯನ್ನು ಟೀಂ ಮ್ಯಾನೇಜ್ಮೆಂಟ್ ಅಥವಾ ನಾಯಕನಿಗೆ ಮಾಹಿತಿ ನೀಡಿಲ್ಲ. ಹೀಗಾಗಿ ಬಿಸಿಸಿಐ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದನ್ನೂ ಓದಿ: ICC ನಿಯಮದಲ್ಲಿ ಮಹತ್ವದ ಬದಲಾವಣೆ: ನಾಯಕರಿಗೆ ರಿಲೀಫ್..!

ಕ್ರಿಕೆಟ್ ಆಡಳಿತ ಸಮಿತಿ ಇದೀಗ ತಂಡದ ಮ್ಯಾನೇಜ್ಮೆಂಟ್ ಹಾಗೂ ಸಿಬ್ಬಂಧಿಗಳನ್ನು ಪ್ರಶ್ನಿಸಿದೆ. ಈ ಕುರಿತು ವರದಿ ನೀಡುವಂತೆ ಸೂಚಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ, ಟೂರ್ನಿಯಿಂದ ಹೊರಬಿದ್ದಿತ್ತು.