ತಿರುವನಂತಪುರಂ(ಸೆ.08): ಆತ ವಿರಾಟ್ ಕೊಹ್ಲಿ, ಸಚಿನ್ ತೆಂಡುಲ್ಕರ್, ಧೋನಿಯಂತೆ ಆಗರ್ಭ ಶ್ರೀಮಂತನಲ್ಲ, ಆದರೆ ಹೃದಯ ಶ್ರಿಮಂತಿಕೆಯಲ್ಲಿ ಇವರೆಲ್ಲರನ್ನು ಮೀರಿಸುವಂತ ಕೆಲಸ ಮಾಡಿದ್ದಾರೆ. ಕ್ರಿಕೆಟ್ ಅಷ್ಟೇನೂ ಕ್ರೇಜ್ ಇರದ ರಾಜ್ಯದಲ್ಲಿ ಬೆಳೆದ ಯುವ ಕ್ರಿಕೆಟಿಗ, ಇದೀಗ ಎಲ್ಲರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ.

ಬಹುಕಾಲದ ಗೆಳತಿಯನ್ನು ವರಿಸಿದ ಸಂಜು ಸ್ಯಾಮ್ಸನ್

ಹೌದು, ನಾವು ಹೇಳ್ತಾ ಇರೋದು ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ ಬಗ್ಗೆ. ಕಳೆದ ವರ್ಷ ಸಂಜು ಸ್ಯಾಮ್ಸನ್ ದಾಂಪತ್ಯ ಜೀವನಕ್ಕೆ ಕಾಲಿರಿಸುವಾಗಲು ಸರಳತೆ ಮೆರೆದಿದ್ದರು. ಅಲ್ಲದೇ ಅದ್ಧೂರಿ ವೆಚ್ಚಕ್ಕೆ ಕಡಿವಾಣ ಹಾಕಿಕೊಳ್ಳುವ ಮೂಲಕ ಕೇರಳ ನೆರೆ ಸಂತ್ರಸ್ಥರಿಗೆ ನೆರವಾಗುವ ಮೂಲಕ ಗಮನ ಸೆಳೆದಿದ್ದರು. ಇದೀಗ ಇಲ್ಲಿನ ಮೈದಾನ ಸಿಬ್ಬಂದಿಗೆ 2 ಪಂದ್ಯಗಳ ಸಂಭಾವನೆ 1.5 ಲಕ್ಷ ರು. ಅನುದಾನ ನೀಡಿ ಸ್ಥಳೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್‌ ಹೃದಯ ಗೆದ್ದಿದ್ದಾರೆ. 

ದ.ಆ​ಫ್ರಿಕಾ ‘ಎ’ ವಿರುದ್ಧ ಭಾರ​ತಕ್ಕೆ 4-1ರಲ್ಲಿ ಸರ​ಣಿ ಜಯ

ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ನಡು​ವಿ​ನ ಅನಧಿಕೃತ ಏಕದಿನ ಸರಣಿ ನಡೆಸುವುದಕ್ಕೆ ಗ್ರೀನ್‌ಫೀಲ್ಡ್‌ ಮೈದಾನ ಸಿಬ್ಬಂದಿ ಭಾರೀ ಶ್ರಮ ವಹಿಸಿದ್ದರು. ಮಳೆಯಿಂದ ಪ್ರತಿ ಪಂದ್ಯಕ್ಕೂ ಔಟ್‌ಫೀಲ್ಡ್‌ ಒದ್ದೆ ಇರುತ್ತಿತ್ತು. ಪಂದ್ಯವೊಂದರ ಸಂಭಾವನೆ 75,000 ರುಪಾಯಿ ಆಗಿದ್ದು, ಸಂಜು ಸರ​ಣಿಯ ಕೊನೆ 2 ಪಂದ್ಯ​ಗ​ಳಲ್ಲಿ ಆಡಿ​ದ್ದರು. ‘ಮೈದಾನ ಸ್ವಲ್ಪ ಒದ್ದೆಯಾಗಿದ್ದರೂ ಅಂಪೈರ್‌ಗಳು ಪಂದ್ಯ ನಡೆಯಲು ಬಿಡು​ತ್ತಿ​ರ​ಲಿಲ್ಲ. ಮೈದಾನ ಸಿಬ್ಬಂದಿಯ ನಿರಂತರ ಶ್ರಮ​ದಿಂದಾಗಿ ಪಂದ್ಯಗಳನ್ನು ನಡೆ​ಸಲು ಸಾಧ್ಯ​ವಾ​ಯಿ​ತು’ ಎಂದು ಸಂಜು ಹೇಳಿ​ದ್ದಾರೆ. ಶುಕ್ರವಾರ ನಡೆದ ಕೊನೆ ಪಂದ್ಯ​ದಲ್ಲಿ ಸಂಜು 48 ಎಸೆ​ತ​ಗಳಲ್ಲಿ 91 ರನ್‌ ಸಿಡಿ​ಸಿ​ದ್ದರು. ಇದರೊಂದಿಗೆ ಭಾರತ ಎ ತಂಡವು 4-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿತ್ತು.