ಬಹುಕಾಲದ ಗೆಳತಿಯನ್ನು ವರಿಸಿದ ಸಂಜು ಸ್ಯಾಮ್ಸನ್
ತಮ್ಮ ಕಾಲೇಜು ಗೆಳತಿಯೊಂದಿಗೆ ಕೆಲ ತಿಂಗಳುಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂಜು ಸ್ಯಾಮ್ಸನ್, ಇದೀಗ ಹಸೆಮಣೆ ಏರಿದ್ದಾರೆ.
ಕೊಚ್ಚಿ[ಡಿ.22]: ಟೀಂ ಇಂಡಿಯಾ ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ ಬಹುಕಾಲದ ಗೆಳತಿ ಚಾರುಲತ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕೇರಳದ ಕೋವಳಂನ ರೆಸಾರ್ಟ್’ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಜು ವಿವಾಹ ಜರುಗಿತು.
ಕಾಲೇಜ್ ಗೆಳತಿಯನ್ನು ಕೈಹಿಡಿಯಲಿದ್ದಾರೆ ಸಂಜು ಸ್ಯಾಮ್ಸನ್
ತಮ್ಮ ಕಾಲೇಜು ಗೆಳತಿಯೊಂದಿಗೆ ಕೆಲ ತಿಂಗಳುಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂಜು ಸ್ಯಾಮ್ಸನ್, ಇದೀಗ ಹಸೆಮಣೆ ಏರಿದ್ದಾರೆ. ರಣಜಿ ಟೂರ್ನಿಯಲ್ಲಿ ಕೇರಳ ತಂಡದ ಪರ ಆಡುವ ಸಂಜು, ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2015ರ ಜುಲೈನಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಸಂಜು ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಸಂಜು ಸ್ಯಾಮ್ಸನ್ ಕ್ರಿಶ್ಚಿಯನ್ ಆದರೆ ಚಾರು ಹಿಂದೂ ನಾಯರ್ ಕುಟುಂಬದವರು. ಹೀಗಾಗಿ ಇವರು ವಿಶೇಷ ವಿವಾಹ ಕಾಯ್ದೆಯಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಎರಡು ಕುಟುಂಬದ 30 ಮಂದಿ ಪಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲ ನಮ್ಮನ್ನು ಹರಸಿದ್ದಾರೆ. ಇದೊಂದು ಸರಳ ಕಾರ್ಯಕ್ರಮವಾಗಿತ್ತು ಎಂದು ಸಂಜು ಹೇಳಿದ್ದಾರೆ.