ದ.ಆಫ್ರಿಕಾ ‘ಎ’ ವಿರುದ್ಧ ಭಾರತಕ್ಕೆ 4-1ರಲ್ಲಿ ಸರಣಿ ಜಯ
ಶಿಖರ್ ಧವನ್ ಹಾಗೂ ಸಂಜು ಸ್ಯಾಮ್ಸನ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡವು ದಕ್ಷಿಣ ಆಫ್ರಿಕಾ ’ಎ’ ವಿರುದ್ಧ ಭರ್ಜರಿ ಜಯಸಾಧಿಸುವುದರೊಂದಿಗೆ ಸರಣಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ತಿರುವನಂತಪುರಂ(ಸೆ.07): ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ 5ನೇ ಹಾಗೂ ಅಂತಿಮ ಅನಧಿಕೃತ ಏಕದಿನ ಪಂದ್ಯದಲ್ಲಿ 36 ರನ್‌ಗಳ ಗೆಲುವು ಸಾಧಿಸಿದ ಭಾರತ ‘ಎ’, 5 ಪಂದ್ಯಗಳ ಸರಣಿಯನ್ನು 4-1ರಲ್ಲಿ ತನ್ನದಾಗಿಸಿಕೊಂಡಿತು.
ಭಾರತ-ದ.ಆಫ್ರಿಕಾ ‘ಎ’ 4ನೇ ಪಂದ್ಯಕ್ಕೆ ಮಳೆ ಕಾಟ
ಮಳೆಯಿಂದಾಗಿ ಪಂದ್ಯವನ್ನು ತಲಾ 20 ಓವರ್‌ಗೆ ಕಡಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ‘ಎ’, ಸಂಜು ಸ್ಯಾಮ್ಸನ್‌ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 204 ರನ್ ಗಳಿಸಿತು. 48 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್‌ನೊಂದಿಗೆ ಸಂಜು 91 ರನ್ ಸಿಡಿಸಿದರು. ಶಿಖರ್ ಧವನ್ 51 ರನ್ ಗಳಿಸಿದರು.
ಅನಧಿಕೃತ ಏಕದಿನ: ಭಾರತ ‘ಎ’ಗೆ 2 ವಿಕೆಟ್ ಜಯ
ದ.ಆಫ್ರಿಕಾ 20 ಓವರಲ್ಲಿ 168 ರನ್‌ಗೆ ಆಲೌಟ್ ಆಯಿತು. 19 ಓವರ್’ನಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸುವ ಮೂಲಕ ಆಫ್ರಿಕಾ ವಿರುದ್ಧ ಸುಲಭ ಜಯ ದಾಖಲಿಸಲು ನೆರವಾದರು.
ಸ್ಕೋರ್: ಭಾರತ ‘ಎ’ 204/4, ದ.ಆಫ್ರಿಕಾ ‘ಎ’ 168/10